Connect with us

    JYOTHISHYA

    ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ..? ಬಣ್ಣ ಬದಲಾದರೆ ಏನಾಗುತ್ತದೆ..?

    ಶ್ರೀ ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆರಾಧಕರು

    ADVERTISEMENT

    ಶ್ರಾವಣ ಮಾಸದ ಹುಣ್ಣಿಮೆಯ ತಿಥಿ ದಿನವನ್ನು ರಕ್ಷಾ ಬಂಧನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನ ಸಹೋದರಿ ತನ್ನ ಅಣ್ಣನಿಗೆ ರಾಖಿ ಕಟ್ಟುವ ಸಂಪ್ರದಾಯವಿದೆ. ಹೀಗೆ ರಾಖಿ ಕಟ್ಟುವುದರ ಮೂಲಕ ಸಹೋದರ ಸುಖೀ ಜೀವನ ನಡೆಸಲಿ ಎಂದು ಹಾರೈಸುತ್ತಾ, ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾಳೆ. ಇದೇ ವೇಳೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಿದರೆ ಒಳ್ಳೆಯದಾಗುತ್ತದೆ ಎಂಬ ಬಗ್ಗೆ ಉಲ್ಲೇಖವಿದೆ. ಅದು ಯಾವುದು ಎಂಬುದರ ಬಗ್ಗೆ ಗಮನಿಸೋಣ.

    ಮೇಷ ರಾಶಿ

    ಈ ರಾಶಿಯ ಸಹೋದರನಿದ್ದರೆ ಈ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದ್ದು, ಇವರಿಗೆ ಕೆಂಪು ಬಣ್ಣದ ರಾಖಿ ಕಟ್ಟುವುದು ಶುಭದಾಯಕ ಎಂದು ಹೇಳಲಾಗುತ್ತದೆ. ಇವರ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ಧಿಯಾಗುತ್ತದೆ.

    ವೃಷಭ ರಾಶಿ

    ಈ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿದೆ. ಬಣ್ಣದ ರಾಖಿಯು ಈ ರಾಶಿಯ ಸಹೋದರನಿಗೆ ಸೂಕ್ತವಾಗುತ್ತದೆ. ಇದನ್ನು ಕಟ್ಟಿದರೆ ಇವರಿಗೆ ತುಂಬಾ ಉತ್ತಮ ಪರಿಣಾಮಗಳಾಗಿ ಒಳ್ಳೆಯ ದಿನಗಳನ್ನು ಕಾಣುತ್ತಾರೆ.

    ಮಿಥುನ ರಾಶಿ

    ಈ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಹಸಿರು ಬಣ್ಣದ ರಾಖಿಯನ್ನು ಇವರಿಗೆ ಕಟ್ಟುವುದು ಶುಭದಾಯಕ. ಇದರಿಂದ ಸುಖ-ಸಮೃದ್ಧಿ ಹಾಗೂ ದೀರ್ಘಾಯಸ್ಸು ಲಭಿಸುತ್ತದೆ.ಕರ್ಕಾಟಕ ರಾಶಿ
    ಈ ರಾಶಿಯ ಅಧಿಪತಿ ಚಂದ್ರ ಗ್ರಹವಾಗಿದೆ. ಈ ರಾಶಿಯವರಿಗೆ ಹಳದಿ ಅಥವಾ ಬಿಳಿ ಬಣ್ಣದ ರಾಖಿ ಹೊಂದಾಣಿಕೆಯಾಗುತ್ತದೆ. ಈ ಬಣ್ಣಗಳ ರಾಖಿಯನ್ನು ಕಟ್ಟಿದರೆ ಇವರಿಗೆ ಶುಭವನ್ನು ತಂದುಕೊಡುತ್ತದೆ.

    ಸಿಂಹ ರಾಶಿ

    ಈ ರಾಶಿಯ ಅಧಿಪತಿ ಸೂರ್ಯಗ್ರಹವಾಗಿದೆ. ಈ ರಾಶಿಯ ಸಹೋದರನಿಗೆ ಹಳದಿ ಅಥವಾ ಕೆಂಪು ಬಣ್ಣದ ರಾಖಿಯನ್ನು ಕಟ್ಟಬೇಕು. ಇದರಿಂದಾಗಿ ಇವರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.

    ಕನ್ಯಾ ರಾಶಿ

    ಈ ರಾಶಿಯ ಅಧಿಪತಿಯು ಬುಧ ಗ್ರಹವಾಗಿದೆ. ಹಸಿರು ಬಣ್ಣದ ರಾಖಿಯನ್ನು ಇವರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಯಾವುದೇ ದೋಷಗಳಿದ್ದರೂ ನಿವಾರಣೆಯಾಗುತ್ತದೆ. ಜೊತೆಗೆ ಸಹೋದರ ಹಾಗೂ ಸಹೋದರಿ ನಡುವಿನ ಬಾಂಧವ್ಯ ಇನ್ನೂ ಗಟ್ಟಿಯಾಗುತ್ತದೆ.

    ತುಲಾ ರಾಶಿ

    ಈ ರಾಶಿಯ ಅಧಿಪತಿಯು ಶುಕ್ರ ಗ್ರಹವಾಗಿದೆ. ಈ ರಾಶಿಯವರಿಗೆ ನೀಲಿ ಇಲ್ಲವೇ ಬಿಳಿ ಬಣ್ಣದ ರಾಖಿಯನ್ನು ಕಟ್ಟುವುದರಿಂದಧನು ರಾಶಿ
    ಈ ರಾಶಿಯ ಅಧಿಪತಿಯು ಗುರು ಗ್ರಹವಾಗಿದೆ. ಈ ರಾಶಿಯವರಿಗೆ ಬಂಗಾರದ ಬಣ್ಣವಾಗಿರುವ ಹಳದಿ ರಾಖಿ ಕಟ್ಟುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಇದರಿಂದ ಇವರ ಮುಂದಿನ ಜೀವನವು ಸುಖಮಯವಾಗಿರುತ್ತದೆ. ಜೊತೆಗೆ ಅಂದುಕೊಂಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ.

    ಮಕರ ರಾಶಿ

    ಈ ರಾಶಿಯ ಅಧಿಪತಿಯು ಶನಿ ಗ್ರಹವಾಗಿದೆ. ಶನಿ ದೇವನಿಗೆ ನ್ಯಾಯದ ದೇವತೆ ಎಂದೇ ಹೇಳಲಾಗುತ್ತದೆ. ಹೀಗಾಗಿ ಈ ರಾಶಿಯವರಿಗೆ ನೀಲಿ ಬಣ್ಣದ ರಾಖಿ ಕಟ್ಟುವುದು ಶುಭ ಎಂದು ಹೇಳಲಾಗುತ್ತದೆ. ಇದರಿಂದ ಸಹೋದರ-ಸಹೋದರಿಯರ ಪ್ರೇಮ-ಬಾಂಧವ್ಯ ಶಾಶ್ವತವಾಗಿ ಉತ್ತಮವಾಗಿರುತ್ತದೆ.

    ಕುಂಭ ರಾಶಿ

    ಈ ರಾಶಿಯ ಅಧಿಪತಿಯೂ ಶನಿ ಗ್ರಹವೇ ಆಗಿದೆ. ಹೀಗಾಗಿ ಶನಿದೇವನಿಗೆ ಪ್ರಿಯವಾದ ಇನ್ನೊಂದು ಬಣ್ಣವಾಗಿರುವ ಹಚ್ಚ ಹಸಿರು ಬಣ್ಣದ ರುದ್ರಾಕ್ಷಿ ಮಾಲೆಯುಳ್ಳ ರಾಖಿಯನ್ನು ಕಟ್ಟಿದರೆ ಬಹಳ ಶ್ರೇಷ್ಠ ಎಂದು ನಂಬಲಾಗಿದೆ. ಹೀಗಾಗಿ ಸಹೋದರಿ ರಾಖಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ.

    ಮೀನ ರಾಶಿ

    ಈ ರಾಶಿಯ ಅಧಿಪತಿಯು ಗುರು ಗ್ರಹವಾಗಿದ್ದು, ಹಸಿರು ಬಣ್ಣದ ರಾಖಿ ಕಟ್ಟುವುದರಿಂದ ಈ ರಾಶಿಯ ಸಹೋದರನಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಹಳದಿ ಬಣ್ಣದ ರಾಖಿ ಸಹ ಶುಭ ಎಂದು ಹೇಳಲಾಗಿದೆ.

    ADVERTISEMENT

    Share Information
    Advertisement
    Click to comment

    Leave a Reply

    Your email address will not be published. Required fields are marked *