Connect with us

    JYOTHISHYA

    ದೈನಂದಿನ ರಾಶಿ ಭವಿಷ್ಯ | ಸೋಮವಾರ, ಆಗಸ್ಟ್ 03, 2020

    ಶ್ರೀ ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆರಾಧಕರು

     

     

    ದಿನ ಭವಿಷ್ಯ: ಸೋಮವಾರ, ಆಗಸ್ಟ್ 03

     

    ಮೇಷ

    ಮೇಷ: ರೈತರಿಗೆ ಉತ್ಸಾಹದಾಯಕ ವಾತಾವರಣವು ಸಂತಸ ತರಲಿದೆ. ಬಂಧುಗಳಿಗೆ ಶುಭಸುದ್ದಿ ತಂದೀತು. ಉದ್ಯೋಗಿಗಳಿಗೆ ಸ್ಥಾನಪಲ್ಲಟದ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸರಸದ ದಿನಗಳಿವು. ಆರೋಗ್ಯ ವೃದ್ಧಿ.

    ವೃಷಭ

    ವೃಷಭ: ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ನಾನಾ ರೀತಿಯಲ್ಲಿ ಧನ ಸಂಪಾದನೆ ಆಗಲಿದೆ. ಗೃಹ ನಿರ್ಮಾಣ ಕಾರ್ಯಗಳಿಗಾಗಿ ಧನವ್ಯಯವಿದೆ. ಕರ್ತವ್ಯದ ಕಾರ್ಯಕರ್ಮದಲ್ಲಿ ವಿಘ್ನಗಳು ತೋರಿಬಂದಾವು.

    ಮಿಥುನ

    ಮಿಥುನ: ಪೂರ್ವಾಪರ ವಿಮರ್ಶಿಸಿ ಮುನ್ನಡೆದರೆ ಉತ್ತಮ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿ ವರ್ಗದವ ರೊಂದಿಗೆ ಭಿನ್ನಾಭಿಪ್ರಾಯ ಬಂದೀತು. ಸಾಂಸಾರಿಕವಾಗಿ ತಾಪತ್ರಯ ಗಳು ನಿವಾರಣೆಯಾದೀತು. ನಿಮ್ಮ ಪ್ರಯತ್ನ ಸಫ‌ಲವಾಗಲಿದೆ.

    ಕಟಕ

    ಕಟಕ: ಸಾಂಸಾರಿಕವಾಗಿ ಇಷ್ಟಾರ್ಥ ಸಿದ್ಧಿಸಲಿದೆ ಸಾಂಸಾರಿಕವಾಗಿ ಹೆಚ್ಚಲಿದೆ. ಅದರಂತೆ ಖರ್ಚುಗಳೂ ಬರಲಿವೆ. ಗೃಹಕೃತ್ಯದಲ್ಲಿ ಇಷ್ಟಾರ್ಥ ಸಿದ್ಧಿಸಲಿದೆ. ವ್ಯಾಪಾರೋದ್ಯಮಿಗಳಿಗೆ ಲಾಭದಾಯಕ ಆದಾಯವಿರುತ್ತದೆ.

    ಸಿಂಹ

    ಸಿಂಹ: ವ್ಯಾಪಾರಿಗಳು ತಮ್ಮ ಆದಾಯವನ್ನು ವೃದ್ಧಿಸ ಲಿದ್ದಾರೆ. ಬಂಧುಮಿತ್ರರ ಸಹಕಾರ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯ ಬಂದೀತು. ಹಿರಿಯರ ಹಾಗೂ ಅಧಿಕಾರಿ ವರ್ಗದವರ ಸಹಕಾರವಿದೆ.

    ಕನ್ಯಾ

    ಕನ್ಯಾ: ಅಸಾಧ್ಯ ಸಂಗತಿಗಳು ಕೂಡ ಸುಲಭದಲ್ಲಿ ನಡೆದು ಹೋದಾವು. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳು ತೋರಿಬಂದರೂ ಸಾಕಷ್ಟು ವಿಸ್ತಾರಗೊಳ್ಳಲಿದೆ. ಕೋರ್ಟು ಕಚೇರಿ ಕಾರ್ಯದಲ್ಲಿ ಯಶಸ್ಸಿದೆ.

    ತುಲಾ

    ತುಲಾ: ವ್ಯಾಜ್ಯ ತಕರಾರುಗಳಿಂದ ಬವಣೆಗಳು ಕಂಡು ಬಂದಾವು. ವ್ಯರ್ಥ ಸಂಚಾರದಿಂದ ಧನವ್ಯಯ ಅನುಭವಕ್ಕೆ ಬರಲಿದೆ. ನೀಚ ಜನರ ಸಹವಾಸದಿಂದ ಅವಮಾನ, ಧನಹಾನಿ ಸಂಭವಿಸೀತು. ಜಾಗ್ರತೆ ಮಾಡುವುದು.

    ವೃಶ್ಚಿಕ: ಪತ್ನಿಯ ಚಾಣಾಕ್ಷತೆ ಹಾಗೂ ದಿಟ್ಟತನದಿಂದ ಕುಟುಂಬದಲ್ಲಿ ಪ್ರಶಾಂತ ವಾತಾವರಣ ಅನುಭವಿಸ ಲಿದ್ದೀರಿ. ದಾಯಾದಿಗಳ ಬಗ್ಗೆ ಹಾಗೂ ಹಿತಶತ್ರುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನಿಮ್ಮೆಣಿಕೆಯಂತೆ ಗುರಿ ಸಾಧಿಸುವಿರಿ.

    ಧನು

    ಧನಸ್ಸು: ಶನಿಚಾರದಿಂದ ನಾನಾರೀತಿಯಲ್ಲಿ ಹಲವು ತರದ ಕಿರಿಕಿರಿಯನ್ನು ಅನುಭವಿಸುವಂತಾದೀತು. ಆಗಾಗ ವಿಳಂಬ ಗತಿಯಲ್ಲಿ ಕೆಲಸ ಕಾರ್ಯಗಳು ನಡೆದರೂ ನಿಮ್ಮ ಕಾರ್ಯದಲ್ಲಿ ಜಯ ದೊರಕಲಿದೆ. ಚಿಂತಿಸದಿರಿ

    ಮಕರ

    ಮಕರ:ಬಂಧುಮಿತ್ರರ ಸಹಕಾರದಿಂದ ಮನೋ ನೆಮ್ಮದಿಯ ಅನುಭವವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಪರೀಕ್ಷೆಗೆ ಗುರಿಯಾಗಲಿದ್ದೀರಿ. ಹಿತಾಸಕ್ತಿಗಳ ವಿರುದ್ಧ ಪ್ರತಿಭಟನೆ ತೋರಿಬರಲಿದೆ. ದಿನಾಂತ್ಯ ಶುಭವಿದೆ.

    ಕುಂಭ

    ಕುಂಭ:ನಿಮ್ಮ ವಿರೋಧಿಗಳ ಕುಕೃತ್ಯ ನಿಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರದು. ಸಾಮಾಜಿಕವಾಗಿ ಕೀರ್ತಿ ಪ್ರತಿಷ್ಠೆ ಹೆಚ್ಚಲಿದೆ. ಭಾಗಿತ್ವದ ವ್ಯವಹಾರದಲ್ಲಿ ಲಾಭದಾಯಕ ಆದಾಯವು ಹೆಚ್ಚಲಿದೆ. ಆರೋಗ್ಯ ಜಾಗ್ರತೆ.

    ಮೀನ

    ಮೀನ: ವೃತ್ತಿರಂಗದಲ್ಲಿ ಅವ್ಯವಸ್ಥೆಗಳ ಮೇಲೆ ಹತೊಟಿ ಸಾಧಿಸಲಿದ್ದೀರಿ. ಸ್ನೇಹಿತರ ಸಹಕಾರ ತೋರಿಬಂದರೂ ಸಲುಗೆಯ ದುರುಪಯೋಗವಾಗದಂತೆ ಜಾಗ್ರತೆ ಮಾಡಿರಿ. ಗೃಹದಲ್ಲಿ ಮಂಗಲಕಾರ್ಯದ ಸಂತಸವಿರುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply