LATEST NEWS
ರಾಜಸ್ಥಾನ – ಕೆಟ್ಟುನಿಂತಿದ್ದ ಬಸ್ ಗೆ ಲಾರಿ ಡಿಕ್ಕಿ 11 ಮಂದಿ ಸಾವು….!!

ರಾಜಸ್ಥಾನ ಸೆಪ್ಟೆಂಬರ್ 13 : ಸೇತುವೆ ಮೇಲೆ ಕೆಟ್ಟು ನಿಂತಿದ್ದ ಬಸ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸಾವನಪ್ಪಿದ ಘಟನೆ ರಾಜಸ್ಥಾನದ ಭರತ್ ಪುರ ಜಿಲ್ಲೆಯಲ್ಲಿ ನಡೆದಿದೆ. ಬಸ್ ರಾಜಸ್ಥಾನದ ಪುಷ್ಕರ್‌ನಿಂದ ಉತ್ತರ ಪ್ರದೇಶದ ವೃಂದಾವನಕ್ಕೆ ತೆರಳುತ್ತಿದ್ದಾಗ ಮುಂಜಾನೆ 4.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಖನ್‌ಪುರ ಪ್ರದೇಶದ ಅಂಟ್ರಾ ಮೇಲ್ಸೇತುವೆಯಲ್ಲಿ ಬಸ್ ನಿಂತಿದ್ದು, ಹಿಂದಿನಿಂದ ಟ್ರೇಲರ್ ಡಿಕ್ಕಿ ಹೊಡೆದಿದೆ. ಐವರು ಪುರುಷರು ಮತ್ತು ಆರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಚಾಲಕ ಮತ್ತು ಕೆಲವು ಪ್ರಯಾಣಿಕರು ಬಸ್‌ನ ಹಿಂದೆ ನಿಂತಿದ್ದಾಗ ವೇಗವಾಗಿ ಬಂದ ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಬದುಕುಳಿದವರು ಹೇಳಿದ್ದಾರೆ.

ಈ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಸಾವನಪ್ಪಿದ ಕುಟುಂಬಕ್ಕೆ 2 ಲಕ್ಷ ಹಣ ಹಾಗೂ ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.