Connect with us

LATEST NEWS

ಇಳಿದ ಮಳೆ ಶಾಂತವಾದ ನೇತ್ರಾವತಿ ನದಿ, ಕಡಿಮೆಯಾದ ನೆರೆ ನೀರು

ಇಳಿದ ಮಳೆ ಶಾಂತವಾದ ನೇತ್ರಾವತಿ ನದಿ, ಕಡಿಮೆಯಾದ ನೆರೆ ನೀರು

ಮಂಗಳೂರು ಅಗಸ್ಟ್ 11: ಕಳೆದ 8 ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ಮಳೆಯಿಂದ ಕೊಂಚ ನಿರಾಳವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಮಳೆ ತಗ್ಗಿದ್ದು, ನೇತ್ರಾವತಿಯ ಪ್ರವಾಹ ಕಡಿಮೆಯಾಗಿದೆ. ಬಂಟ್ವಾಳ- ಬೆಳ್ತಂಗಡಿ ರಸ್ತೆಯಲ್ಲಿ‌ ವಾಹನಗಳ ಸಂಚಾರ ಆರಂಭವಾಗಿದೆ.

ಭಾರಿ ಮಳೆಗೆ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂಜಾನೆಯಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಮೋಡ ಕವಿದ ವಾತಾವರಣ ಹಾಗೂ ಸಣ್ಣ ಪ್ರಮಾಣದ ಬಿಸಿಲು ಕೂಡ ಇತ್ತು.

ಕಳೆದ 8 ದಿನಗಳಿಂದ ಪಶ್ಚಿಮಘಟ್ಟ ಹಾಗೂ ಕರಾವಳಿಯಲ್ಲಿ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಕರಾವಳಿಯ ಎಲ್ಲಾ ನದಿಗಳು ಅಪಾಯಮಟ್ಟ ಮೀರಿ ಹರಿಯುತಿತ್ತು, ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ಮುಂಜಾನೆ 11.7 ಮೀ. ಅಪಾಯಕಾರಿ ಮಟ್ಟದಲ್ಲಿ ಹರಿದು ಬಂಟ್ವಾಳ ವಿವಿಧ ಭಾಗಗಳಲ್ಲಿ ಪ್ರವಾಹ ಉಂಟಾಗಿ ದ್ವೀಪದಂತಾಗಿತ್ತು. ನೇತ್ರಾವತಿ ನದಿಯು ಶನಿವಾರ ಸಂಜೆ 10.7 ಮೀ. ಆಗಿ ಹಾಗೂ ರಾತ್ರಿ 10.5 ಮೀ.ನಲ್ಲಿ ಹರಿಯುತ್ತಿತ್ತು.

ಇಂದು ಮಳೆಯ ಪ್ರಮಾಣ ಇಳಿಕೆಯಾದ್ದರಿಂದ ನೇತ್ರಾವತಿಯ ನದಿಯ ನೀರಿನ ಮಟ್ಟ ಕಡಿಮೆಯಾಗಿದೆ. ಇಂದು ಬೆಳಗ್ಗೆಯ ವೇಳೆ ನೇತ್ರಾವತಿ ನೀರಿನ ಮಟ್ಟ 9.1 ಮೀ.‌ ಆಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ತಿಳಿಸಿದರು.

ಆದರೆ, ನೇತ್ರಾವತಿ ಮಟ್ಟ ಕಡಿಯಾಗಿ ಒಳರಸ್ತೆ, ಕೃಷಿ ಭೂಮಿ ಗೆ ಬಂದಿದ್ದ ಇಳಿಮುಖವಾಗುತ್ತಿದ್ದು, ನೆರೆ ಪೀಡಿತ ಪ್ರದೇಶಗಳಾದ ಆಲಡ್ಕ, ಬೋಗೋಡಿ, ಪಾಣೆಮಂಗಳೂರು, ತಲಪಾಡಿ, ಜಕ್ರಿಬೆಟ್ಟು, ಬಡ್ಡಕಟ್ಟೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ನಿಧಾನವಾಗಿ ನೆರೆ ತಗ್ಗುತ್ತಿದೆ. ಶನಿವಾರ ನೆರೆಗೆ ಸಿಲುಕಿ ನಲುಗಿದ ಬಂಟ್ವಾಳ ಪೇಟೆ ಜನರು ನಿಟ್ಟುಸಿರು ಬಿಡುವಂತಾಗಿದೆ.

ಬಂಟ್ವಾಳದಿಂದ ಧರ್ಮಸ್ಥಳ ಕ್ಕೆ ಹೋಗುವ ರಸ್ತೆ ಜಕ್ರಿಬೆಟ್ಟು ವಿನಲ್ಲಿ ರಸ್ತೆಗೆ ನೀರು ಬಂದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆದರೆ, ರಾತ್ರಿಯಿಂದ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ನೆರೆ ಇಳಿದಿರುವ ಮನೆಗಳ ಹಾಗೂ ಗಂಜಿಕೇಂದ್ರದಲ್ಲಿರುವ ಕುಟುಂಬಗಳು ಕೂಡ ವಾಪಸು ಮನೆಯ ಸ್ವಚ್ಚತೆಗೆ ತೆರಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *