LATEST NEWS
ಉಡುಪಿ ಕಡಿಮೆಯಾದ ಮಳೆ ಅಬ್ಬರ…ಆರೆಂಜ್ ಅಲರ್ಟ್ ಘೋಷಣೆ

ಉಡುಪಿ ಸೆಪ್ಟೆಂಬರ್ 22: ಉತ್ತರಾ ಮಳೆಯ ಅಬ್ಬರಕ್ಕೆ ಸಂಪೂರ್ಣ ತತ್ತರಿಸಿದ ಉಡುಪಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. ಜಿಲ್ಲೆಯಾದ್ಯಂತ ಮೊಡ ಕವಿದ ವಾತಾವರಣ ಇದ್ದು ಮಳೆ ಕಡಿಮೆಯಾಗಿದೆ.
ಈ ನಡುವೆ ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹತ್ತಾರು ಮನೆಗಳು ಹಾನಿಗೀಡಾಗಿದೆ. ಸುವರ್ಣ ನದಿ ತೀರದಲ್ಲಿ ಅತಿ ಹೆಚ್ಚು ಅವಘಡಗಳು ಸಂಭವಿಸಿದೆ. ಉಡುಪಿ ತಾಲೂಕು ಮರ್ಣೆ ಗ್ರಾಮದ ಬಸವ ಮೂಲ್ಯ ಎಂಬವರ ಮನೆ ಮತ್ತು ಕೊಟ್ಟಿಗೆ ಮಳೆ ನೀರಿಗೆ ಸಂಪೂರ್ಣ ಮುಳುಗಡೆಯಾಗಿತ್ತು.

ನೆರೆಯ ಪ್ರಮಾಣ ಇಳಿಕೆಯಾಗಿ ಕೆಲವೇ ಗಂಟೆಗಳಲ್ಲಿ ಬಸವ ಮೂಲ್ಯರ ಮನೆ ಮತ್ತು ಕೊಟ್ಟಿಗೆ ಕುಸಿದುಬಿದ್ದಿದೆ. ಕೊಟ್ಟಿಗೆಯಲ್ಲಿದ್ದ ದನಗಳನ್ನು ಮಳೆಗೂ ಮೊದಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಕೊಟ್ಟಿಗೆ ಬೀಳುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಉಡುಪಿ ಜಿಲ್ಲಾಡಳಿತ ಕೊಟ್ಟ ಲೆಕ್ಕಾಚಾರ ಪ್ರಕಾರ ಜಿಲ್ಲೆಯಲ್ಲಿ 67ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಗೀಡಾಗಿದೆ.