BANTWAL
ಪೆರಾಜೆ – ಮಳೆ ಅಬ್ಬರಕ್ಕೆ ಮನೆಯೊಳಗೆ ನುಗ್ಗಿದ ನೀರು ….!!

ಬಂಟ್ವಾಳ ಜೂನ್ 14: ಕರಾವಳಿಯಲ್ಲಿ ಮಳೆ ಅಬ್ಬರ ಜೊರಾಗಿದ್ದು,ಹಲವು ಪ್ರದೇಶಗಳಲ್ಲಿ ಮಳೆಯಿಂದ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಗುಡ್ಡ ಕುಸಿದು ನಾಲ್ಕು ಮನೆಯೊಳಗೆ ಮಳೆ ನೀರು ನುಗ್ಗಿದ ಘಟನೆ ಪೆರಾಜೆ ಗ್ರಾಮದ ಬುಡೋಳಿ ಸೈಟ್ ಎಂಬಲ್ಲಿ ನಡೆದಿದೆ.
ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುಡೋಳಿ ನಿವಾಸಿಗಳಾದ ಜೊಹರಾ ಬುಬಕ್ಕರ್, ನಬೀಶಾ ಬಶೀರ್, ಅವ್ವಮ್ಮ ಹಾಗೂ ಸುಲೈಮಾನ್ ಅವರ ಮನೆಯೊಳಗೆ ನೀರು ನುಗ್ಗಿದ್ದು ನಾಲ್ಕು ಮನೆಗೆ ಸಂಪೂರ್ಣ ಜಲಾವೃತಗೊಂಡಿದೆ.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಎಡೆಬಿಡದೆ ಸುರಿಯುವ ಮಳೆಗೆ ಬುಡೋಳಿ ಸೈಟ್ ನಲ್ಲಿರುವ ಮನೆಯ ಹಿಂಬದಿಯಲ್ಲಿ ರುವ ಗುಡ್ಡ ಕುಸಿದು ಮಳೆ ನೀರು ಹರಿದು ಹೋಗಲು ಸಾಧ್ಯವಿಲ್ಲದೆ ಅಲ್ಲೇ ಮನೆಯಂಗಳದಲ್ಲಿದ್ದ ಬಾವಿಗೆ ತುಂಬಿದೆ,ಬಾವಿ ಸಂಪೂರ್ಣ ಮಳೆ ನೀರಿನೊಂದಿಗೆ ಮಣ್ಣು ತುಂಬಿದ್ದು ಬಾವಿ ಸಂಪೂರ್ಣ ಮುಚ್ಚಿಹೋಗಿದೆ.

ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ಗ್ರಾಮಪಂಚಾಯತ್ ಸಿಬ್ಬಂದಿಗಳು ನಾಲ್ಕು ಕುಟುಂಬಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರನ್ನು ಹತ್ತಿರದ ಸಂಬಂಧಿ ಕರ ಮನೆಗೆ ಸ್ಥಳಾಂತರ ಮಾಡಿ ಮನೆಯೊಳಗಿನ ನೀರನ್ನು ತೆಗೆಯುವ ಕೆಲಸ ಆರಂಭಿಸಲಾಗಿದೆ. ಜೊತೆಗೆ ಮಳೆ ನೀರು ಹರಿದು ಹೋಗಲು ಪ್ರತ್ಯೇಕ ಚರಂಡಿ ವ್ಯವಸ್ಥೆ ನಿರ್ಮಾಣ ದ ಕಾರ್ಯ ನಡೆಯುತ್ತಿದೆ.