LATEST NEWS
ಚಂಡ ಮಾರುತ ರೆಮಲ್ ಅಬ್ಬರಕ್ಕೆ ರೈಲು ಬೋಗಿಗಳಿಗೂ ಸರಪಳಿ ಬಂಧನ
ಪಶ್ಚಿಮಬಂಗಾಳ ಮೇ 26: ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದತ್ತ ಸಂಚರಿಸುತ್ತಿದ್ದು, ಇಂದು ಯಾವುದೇ ಕ್ಷಣದಲ್ಲೂ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ನಡುವೆ ಚಂಡಮಾರುತದ ಅಬ್ಬರಕ್ಕೆ ಹಾನಿ ತಡೆಯಲು ಪಶ್ಚಿಮಬಂಗಾಳದಲ್ಲಿ ಸಕಲ ಸಿದ್ದಕೆ ನಡೆಸಲಾಗಿದೆ. ರೆಮಾಲ್ ಚಂಡಮಾರುತವು ಗಂಟೆಗೆ 130 ಕಿ.ಮೀ ವೇಗದಲ್ಲಿ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಹೆಚ್ಚಿನ ಅನಾಹುತ ತಡೆಯಲು ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತವು ಭಾನುವಾರ ಸಂಜೆ ಮತ್ತು ಮಧ್ಯರಾತ್ರಿಯ ನಡುವೆ ದೇಶದ ಕರಾವಳಿಯ ಮೇಲಿಂದ ದಾಟಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರೆಮಾಲ್ ಚಂಡಮಾರುತ ಪಶ್ಚಿಮ ಬಂಗಾಲದ ಕೆಲವು ಪ್ರದೇಶಗಳ ಮೇಲೆ ಪ್ರಭಾವ ಬೀರುವ ಹಿನ್ನಲೆ ರೈಲ್ವೆ ಇಲಾಖೆ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಬೋಗಿಗಳನ್ನು ರೈಲ್ವೆ ಪಟ್ಟಿಗೆ ಸರಪಳಿ ಹಾಗೂ ಬೀಗ ದಿಂದ ಲಾಕ್ ಮಾಡಿ ಇಟ್ಟದೆ. ಚಂಡಮಾರುತದ ಗಾಳಿ ರೈಲು ಬೋಗಿಗಳು ರೈಲ್ವೆ ಹಳಿಯ ಮೇಲೆ ಜಾರಿಕೊಂಡು ಮುಂದೆ ಸಾಗುವ ಸಾಧ್ಯತೆ ಹಿನ್ನಲೆ ಈ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
#WATCH | Cyclone ‘Remal’ | Howrah, West Bengal: As a precautionary measure, trains at the Shalimar railway station were tied to the railway track with the help of chains and locks to keep the trains from sliding away due to strong winds. pic.twitter.com/3PQtlCO4KT
— ANI (@ANI) May 26, 2024