Connect with us

    LATEST NEWS

    ಪೊಲೀಸ್ ಜೀಪ್ ಮೇಲೆ ಕಾಂಗ್ರೇಸ್ ಕಾರ್ಯಕರ್ತರ ರೋಡ್ ಶೋ – ಯಾವುದೇ ಕ್ರಮ ಇಲ್ಲ ರಮಾನಾಥ ರೈ

    ಪೊಲೀಸ್ ಜೀಪ್ ಮೇಲೆ ಕಾಂಗ್ರೇಸ್ ಕಾರ್ಯಕರ್ತರ ರೋಡ್ ಶೋ – ಯಾವುದೇ ಕ್ರಮ ಇಲ್ಲ ರಮಾನಾಥ ರೈ

    ಮಂಗಳೂರು ಮಾರ್ಚ್ 21: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯ ಸಂದರ್ಭ ಮಂಗಳೂರಿನಲ್ಲಿ ನಡೆದ ರೋಡ್ ಶೋನಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಪುಂಡಾಟವನ್ನು ಸಚಿವ ರಮಾನಾಥ ರೈ ಬೆಂಬಲಿಸಿದ್ದಾರೆ.

    ರಾಹುಲ್ ಗಾಂಧಿ ರೋಡ್ ಸಂದರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪೊಲೀಸ್ ಜೀಪ್ ಮೇಲೆ ಹತ್ತಿ ಪುಂಡಾಟಿಕೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ರಮಾನಾಥ ರೈ ಇದೊಂದು ಅತೀ ಸಣ್ಣ ವಿಷಯವಾಗಿದ್ದು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ಅಲ್ಲದೇ ಪೊಲೀಸರಿಗೆ ಕೂಡ ಕ್ರಮ ತೆಗೆದುಕೊಳ್ಳಲು ಸೂಚಿಸುವುದಿಲ್ಲ ಎಂದು ತಿಳಿಸಿದರು. ಈ ಮೂಲಕ ಕಾಂಗ್ರೇಸ್ ಕಾರ್ಯಕರ್ತರ ಪುಂಡಾಟಿಕೆಗೆ ರಮಾನಾಥ ರೈ ಪರೋಕ್ಷವಾಗಿ ಬೆಂಬಲಿಸಿದ್ದಾರೆ.

    ಇದೆಲ್ಲಾ ಸ್ವಾಭಾವಿಕ ಕ್ರಿಯೆಯಾಗಿದ್ದು ಪೊಲೀಸ್ ಜೀಪ್ ಹತ್ತಿ ಧ್ಚಜ ಹಿಡಿದುಕೊಂಡರೆ ಏನೂ ಆಗೋದಿಲ್ಲ, ಬಿಜೆಪಿಯವರು ಇದಕ್ಕಿಂತ ದೊಡ್ಡ ತಪ್ಪು ಮಾಡುತ್ತಾರೆ. ಬಿಜೆಪಿಯವರ ತಪ್ಪಿಗಿಂತ ಇದು ದೊಡ್ಡ ತಪ್ಪಲ್ಲ ಎಂದು ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *