LATEST NEWS
ಕೇರಳ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿ ಸಂಭ್ರಮಿಸಿದ ರಾಹುಲ್ ಗಾಂಧಿ
ಕೇರಳ ಫೆಬ್ರವರಿ 25: ಕೇರಳ ಪ್ರವಾಸದಲ್ಲಿರುವ ಕಾಂಗ್ರೇಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ಕೊಲ್ಲಮ್ ಜಿಲ್ಲೆಯಲ್ಲಿ ಸಮುದ್ರಕ್ಕೆ ಜಿಗಿದು ಈಜಾಡಿದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೇರಳ ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ನಿನ್ನೆ ಕೊಲ್ಲಂ ಜಿಲ್ಲೆಗೆ ಕಾಂಗ್ರೆಸ್ ನಾಯಕರೊಂದಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅಲ್ಲಿ ತಂಗಸ್ಸೆರಿ ಸಮುದ್ರದಲ್ಲಿ ತಮ್ಮ ಕೆಲವು ಸ್ನೇಹಿತರು ಹಾಗೂ ಮೀನುಗಾರರೊಂದಿಗೆ ಸುಮಾರು 10 ನಿಮಿಷಗಳ ಕಾಲ ಈಜಾಡಿದ್ದಾರೆ.
ಸಮುದ್ರ ತೀರಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರು ಕೆಲವು ಮೀನುಗಾರರು ಮೀನು ಹಿಡಿಯಲು ಬಲೆ ಬೀಸಿ ಸಮುದ್ರಕ್ಕೆ ಜಿಗಿದರು. ಅವರೊಟ್ಟಿಗೆ ರಾಹುಲ್ ಗಾಂಧಿ ಸಹ ದೋಣಿಯಿಂದ ನೀರಿಗೆ ಜಿಗಿದರು.
ನಮ್ಮೊಂದಿಗೆ ಹೇಳದೆ ಸಮುದ್ರಕ್ಕೆ ಧುಮುಕಿದ ರಾಹುಲ್ ಅವರನ್ನು ಕಂಡು ನಾವೂ ಭಯಭೀತರಾದೆವು. ಆದರೆ ಅವರು ಮಾತ್ರ ಕೂಲ್ ಆಗಿ ನೀರಿನಲ್ಲಿ 10 ನಿಮಿಷ ಕಾಲಕಳೆದರು. ರಾಹುಲ್ ಒಬ್ಬ ಉತ್ತಮ ಈಜುಗಾರ ಎಂದು ಜೊತೆಗಿದ್ದ ಮುಖಂಡರು ವಿವರಿಸಿದರು.
ರಾಹುಲ್ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಟಿ. ಎನ್ ಪ್ರತಾಪನ್ ಸೇರಿದಂತೆ ಇತರ ನಾಲ್ಕು ಜನ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು. ರಾಹುಲ್ ಅವರೊಂದಿಗೆ ಒಟ್ಟು 25 ಜನ ಮೀನುಗಾರರೂ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ಮೀನುಗಾರಿಕೆ ಮಾಡಿ ಮೀನುಗಾರರು ತಯಾರಿಸಿದ ಮೀನಿನ ಖಾದ್ಯವನ್ನು ಸವಿದು, ಸುಮಾರು 2.30 ಗಂಟೆಗಳ ಕಾಲ ಸಮುದ್ರದಲ್ಲಿ ಕಾಲಕಳೆದರು.