LATEST NEWS
ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಗೆ ಗೇಟ್ ಪಾಸ್…!!

ಮಂಗಳೂರು ಎಪ್ರಿಲ್ 06: ಅನಿರೀಕ್ಷಿತ ಬೆಳವಣೆಗೆಯೊಂದರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಆರ್ ರಮೇಶ್ ಈ ಆದೇಶ ಹೊರಡಿಸಿದ್ದು, ರಹೀಂ ಉಚ್ಚಿಲ ಇವರನ್ನು ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದ್ದಾರೆ.

ಇನ್ನು ಪದಚ್ಯುತಿಗೆ ಸ್ಪಷ್ಟ ಕಾರಣ ಆದೇಶದಲ್ಲಿ ತಿಳಿಸಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಹೀಂ ಉಚ್ಚಿಲ್, ಪದಚ್ಯುತಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದೇಶ ಬಂದ ನಂತರ ನನಗೂ ವಿಷಯ ತಿಳಿಯಿತು. ಎರಡು ಬಾರಿ ಅಕಾಡಮಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವ ತೃಪ್ತಿ ಇದೆ ಎಂದಿದ್ದಾರೆ.