Connect with us

  LATEST NEWS

  ಮಂಗಳೂರು – ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವುಗಳ ರಕ್ಷಣೆ

  ಮಂಗಳೂರು ಫೆಬ್ರವರಿ 17: ಪಾಳು ಬಾವಿಯಲ್ಲಿ ಸಿಲುಕಿದ್ದ ಎರಡು ಹೆಬ್ಬಾವುಗಳನ್ನು ಉರಗಪ್ರೇಮಿಗಳ ತಂಡವೊಂದು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.


  ಮಂಗಳೂರಿನ‌ ಕೋಡಿಕಲ್ ಎಂಬಲ್ಲಿರುವ ಪಾಳು ಬಾವಿಯಲ್ಲಿ ಕಳೆದ ಕೆಲವು ದಿನಗಳಿಂದ ಹೊರಬಾರಲಾಗದ ಸ್ಥಿತಿಯಲ್ಲಿ ಎರಡು ಹೆಬ್ಬಾವುಗಳು ಸಿಕ್ಕಿಹಾಕಿಕೊಂಡಿದ್ದವು. ಈ ಬಗ್ಗೆ ಮಾಹಿತಿ ತಿಳಿದ ಉರಗಪ್ರೇಮಿ ಅಜಯ್ ನೇತೃತ್ವದ ತಂಡ ಬಾವಿಗಿಳಿದು ಹೆಬ್ಬಾವುಗಳನ್ನು ರಕ್ಷಣೆ ಮಾಡಿದೆ. ಪಾಳು ಬಾವಿಯಾದ ಕಾರಣ ಬಾವಿಗೆ ಏಣಿಯ ವ್ಯವಸ್ಥೆ ಮಾಡಿ ಹೆಬ್ಬಾವುಗಳನ್ನು ತಂಡ ಮೆಲೆತ್ತಿದೆ. ಈ ಕಾರ್ಯಾಚರಣೆಯಲ್ಲಿ ಪರಿಸರ ಹೋರಾಟಗಾರ ಜೀತು, ಭುವನ್ ಅವರು ಪಾಲ್ಗೊಂಡಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply