LATEST NEWS
ಶಾಲಾ ಬಸ್ ನಲ್ಲಿ ಬೃಹತ್ ಗಾತ್ರದ ಹೆಬ್ಬಾವು…!!
ಉತ್ತರಪ್ರದೇಶ ಅಕ್ಟೋಬರ್ 17: ಬೃಹತ್ ಗಾತ್ರದ ಹೆಬ್ಬಾವೊಂದು ಶಾಲಾ ಬಸ್ ನಲ್ಲಿ ಅಡಗಿ ಕುಳಿತ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ. ರಾಯ್ ಬರೇಲಿಯ ರಿಯಾನ್ ಪಬ್ಲಿಕ್ ಸ್ಕೂಲ್‌ನ ಬಸ್‌ನ ಸೀಟಿನ ಕೆಳಗೆ ಈ ಬೃಹತ್ ಗಾತ್ರದ ಹೆಬ್ಬಾವು ಕುಳಿತಿತ್ತು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹೆಬ್ಬಾವನ್ನು ಬಸ್ ನಿಂದ ಹೊರಕ್ಕೆ ತೆಗೆದು ರಕ್ಷಣೆ ಮಾಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಅಧಿಕಾರಿಯೊಬ್ಬರು ಶಾಲಾ ಬಸ್‌ನ ಕೆಳಗಿನಿಂದ ಹೆಬ್ಬಾವನ್ನು ಎಳೆಯುತ್ತಿರುವುದನ್ನು ಕಾಣಬಹುದು. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಸಿಕ್ಕಿಬಿದ್ದ ಹೆಬ್ಬಾವಿನ ತೂಕ ಸುಮಾರು 80 ಕೆಜಿ ಮತ್ತು ಅದರ ಉದ್ದ 11ವರೆ ಅಡಿ. ಅವರನ್ನು ಸುರಕ್ಷಿತವಾಗಿ ಡಾಲ್ಮೌ ಅರಣ್ಯದಲ್ಲಿ ಬಿಡಲಾಗಿದೆ.
ಸುಮಾರು ಒಂದು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ ಹೆಬ್ಬಾವನ್ನು ಹೇಗೋ ಹತೋಟಿಗೆ ತರಲಾಯಿತು. ಅದೃಷ್ಟವಶಾತ್ ಭಾನುವಾರವಾದ್ದರಿಂದ ಶಾಲೆ ಮುಚ್ಚಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.