DAKSHINA KANNADA
ಪುತ್ತೂರು : ಮಹಿಳೆಯು ಕತ್ತಿನಲ್ಲಿದ್ದ ಚಿನ್ನದ ಆಭರಣ ಎಗರಿಸಿದ್ದ ಸರಗಳ್ಳನ 12 ವರ್ಷಗಳ ಬಳಿಕ ಬಂಧನ..!
ಪುತ್ತೂರು : ದಶಕದ ಹಿಂದೆ ಮಹಿಳೆಯೋರ್ವರ ಕತ್ತಿನಲ್ಲಿದ್ದ ಚಿನ್ನದ ಆಭರಣವನ್ನು ಎಗರಿಸಿದ್ದ ಸರಗಳ್ಳನ( chain snatcher) ನ್ನು 12 ವರ್ಷಗಳ ಬಳಿಕ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
2012 ನೇ ಇಸವಿಯಲ್ಲಿ ದಕ್ಷಿಣ ಕನ್ನಡದ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿ ಮಹಿಳೆಯೋರ್ವರ ಕತ್ತಿನಲ್ಲಿದ್ದ ಚಿನ್ನದ ಆಭರಣವನ್ನು ಆರೋಪಿ ಎಳೆದೊಯ್ದಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಬಂಧನಕ್ಕೊಳಗಾಗಿದ್ದ ಆರೋಪಿ ಮಹ್ಮದ್ ಶಾಫಿ ಬಳಿಕ ನ್ಯಾಯಾಲಯದಲ್ಲಿನ ವಿಚಾರಣೆಗೆ ಹಾಜರಾಗದೆ ತಲೆ ಮರೆಯಿಸಿಕೊಂಡಿದ್ದ . ತಲೆ ಮರೆಯಿಸಿಕೊಂಡಿದ್ದ ಮಹಮ್ಮದ್ ಶಾಫಿಯನ್ನು 12 ವರ್ಷಗಳ ಬಳಿಕ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸುರತ್ಕಲ್ ಬೊಕ್ಕಬೆಟ್ಟು ಗ್ರಾಮದ ಕೃಷ್ಣಾಪುರ 8 ನೇ ಬ್ಲಾಕ್ ನಿವಾಸಿಯಾಗಿರುವ ಆರೋಪಿ ಮಹಮ್ಮದ್ ಶಾಫಿ 12 ವರ್ಷಗಳ ಹಿಂದೆ ಗೋಳಿತೊಟ್ಟು ಎಂಬಲ್ಲಿ ಬೈಕಿನಲ್ಲಿ ಬಂದು ಪಾದಾಚಾರಿ ಮಹಿಳೆಯ ಚಿನ್ನಾಭರಣವನ್ನು ಎಳೆದೊಯ್ದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಬಂಧನಕ್ಕೊಳಗಾಗಿದ್ದ ಈತ ಬಳಿಕ ನ್ಯಾಯಾಲಯದಲ್ಲಿನ ವಿಚಾರಣೆಗೆ ಹಾಜರಾಗದೆ ತಲೆ ಮರೆಯಿಸಿಕೊಂಡಿದ್ದ . ಆರೋಪಿಯ ಜಾಡು ಹಿಡಿದ ಪೊಲೀಸರು ಉಡುಪಿ ಜಿಲ್ಲೆಯ ಅಂಪಾರ್ ಎಂಬಲ್ಲಿ ಗುರುವಾರದಂದು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತ ಆರೋಪಿಯು ಬೆಳ್ತಂಗಡಿ, ಬಂಟ್ವಾಳ, ವಿಟ್ಲ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆಸಿದ ಅಪರಾಧ ಕೃತ್ಯಗಳಲ್ಲಿಯೂ ತಲೆ ಮರೆಯಿಸಿಕೊಂಡಿದ್ದ. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನ ಬಗ್ಗೆ ಶೋಧ ಕಾರ್ಯಾಚರಣೆ ನಡೆಸಿದ್ದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್. ಹಾಗೂ ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕರುಗಳಾದ ಅವಿನಾಶ್ ಹೆಚ್ ಗೌಡ, ರುಕ್ಮ ನಾಯ್ಕ ರವರ ಮಾರ್ಗದರ್ಶನದಲ್ಲಿ, ಸಿಬ್ಬಂದಿಗಳಾದ ಹಿತೋಷ್ ಕುಮಾರ್, ಗಿರೀಶ್ ವಿ. ಕಾರ್ಯಾಚರಿಸಿದ್ದರು.
You must be logged in to post a comment Login