DAKSHINA KANNADA
ಪುತ್ತೂರು ಟೌನ್ ಕೋ ಅಪರೇಟೀವ್ ಬ್ಯಾಂಕ್ ನ ಆಡಳಿತ ಮಂಡಳಿಗೆ ಚುನಾವಣೆ – ಗೆಲುವಿಗೆ ಭಾರೀ ಪೈಪೋಟಿ
ಪುತ್ತೂರು ಜನವರಿ 25: ಪ್ರತಿಷ್ಠಿತ ಪುತ್ತೂರು ಟೌನ್ ಕೋ ಅಪರೇಟೀವ್ ಬ್ಯಾಂಕ್ ನ ಆಡಳಿತ ಮಂಡಳಿಗೆ ಚುನಾವಣೆಯ ಮತದಾನ ಇಂದು ನಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಸರಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಆರಂಭಿಸಿದ ಮೊದಲ ಸಹಕಾರಿ ಬ್ಯಾಂಕ್ ಪುತ್ತೂರು ಟೌನ್ ಕೋ ಅಪರೇಟೀವ್ ಬ್ಯಾಂಕ್, ಸುಮಾರು 115 ವರ್ಷ ಇತಿಹಾಸವಿರುವ ಟೌನ್ ಕೋ ಅಪರೇಟೀವ್ ಬ್ಯಾಂಕ್ ನ ಆಡಳಿತ ಮಂಡಳಿಯ12 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಒಟ್ಟು 13 ಸದಸ್ಯರ ಆಡಳಿತ ಮಂಡಳಿಯಲ್ಲಿ 1 ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ. ಬೆಜೆಪಿ ಬೆಂಬಲಿತ ಸಹಕಾರ ಭಾರತಿ ಮತ್ತು ಕಾಂಗ್ರೇಸ್ ಬೆಂಬಲಿತ ಸಾಮ್ರಾಟ್ ಸಹಕಾರಿ ಒಕ್ಕೂಟದ ನಡುವೆ ನೇರ ಹಣಾಹಣಿ ಇದ್ದು , ಸುಮಾರು 3200 ಮತದಾರರಿಗೆ ಮತದಾನದ ಅವಕಾಶ ಇದೆ. ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಂಜೆ 4 ಗಂಟೆ ತನಕ ಮತದಾನಕ್ಕೆ ಅವಕಾಶವಿದ್ದು, ಮತದಾನವಾದ ಬಳಿಕ ಇಂದೇ ನಡೆಯಲಿರುವ ಮತ ಎಣಿಕೆ ಕಾರ್ಯ, ಎರಡೂ ಪಕ್ಷಗಳ ನಡುವೆ ಗೆಲುವಿಗಾಗಿ ಭಾರೀ ಪೈಪೋಟಿ, ಸ್ಥಳದಲ್ಲಿ ಬಿಗು ಪೋಲೀಸ್ ಬಂದೋಬಸ್ತ್ ಎರ್ಪಡಿಸಲಾಗಿದೆ.