DAKSHINA KANNADA
ಪುತ್ತೂರು-ಮಂಗಳೂರು ತಡೆರಹಿತ ಬಸ್‍ಗೆ ಚಾಲನೆ

ಮಂಗಳೂರು, ಜುಲೈ14: ಪುತ್ತೂರಿನಿಂದ ಮಂಗಳೂರು ನಡುವೆ ಹೊಸದಾಗಿ ತಡೆರಹಿತ ಸರಕಾರಿ ಬಸ್ ಓಡಾಡಕ್ಕೆ ಸೋಮವಾರ ಪುತ್ತೂರು ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರು ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿ ತಡೆರಹಿತ ಬಸ್‍ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೂ ಗುಚ್ಛ ನೀಡುವ ಮೂಲಕ ಶುಭ ಹಾರೈಸಿದರು.
ಪುತ್ತೂರು-ಮಂಗಳೂರು ನಡುವೆ ತಡೆರಹಿತವಾಗಿ ಪ್ರತಿದಿನ 7 ಬಸ್ಸುಗಳು 29 ಟ್ರಿಪ್‍ಗಳ ಸಂಚಾರ ನಡೆಸಲಿದೆ. ಪುತ್ತೂರು ಮಂಗಳೂರು ನಡುವೆ ಎಲ್ಲಿಯೂ ನಿಲ್ಲದೆ ನೇರ ಸಂಚರಿಸಲಿದ್ದು, ಅತಿ ಕಡಿಮೆ ಅವಧಿಯಲ್ಲಿ ತಲುಪಲಿದೆ. ಈ ಬಸ್‍ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣವಾಗಿದ್ದು ಎಲ್ಲಾ ರೀತಿಯ ಪಾಸುಗಳು ಅನ್ವಯವಾಗುತ್ತದೆ. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮತ್ತಿತರರು ಉಪಸ್ಥಿತರಿದ್ದರು.
