Connect with us

  BANTWAL

  ಪುತ್ತೂರು : ವೃದ್ಧ ದಂಪತಿ ಮೇಲೆ ಹಲ್ಲೆಮಾಡಿ ಹಿಗ್ಗಾಮುಗ್ಗಾ ಥಳಿಸಿದ ಚರ್ಚ್ ಪಾದ್ರಿ, ವ್ಯಾಪಕ ಖಂಡನೆ..!

  ಪುತ್ತೂರು: ಚರ್ಚ್ ಪಾದ್ರಿಯೊಬ್ಬರು ಹಿರಿಯ ದಂಪತಿಯನ್ನು ಅಮಾನುಷವಾಗಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಮನೆಲಾ ಚರ್ಚ್‌ ವ್ಯಾಪ್ತಿಯಲ್ಲಿ  ನಡೆದಿದೆ.

   

  ಫೆಬ್ರವರಿ 29 ರಂದು ಈ ಘಟನೆ ನಡೆದಿದ್ದು ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79) ದಂಪತಿ ಮನೆಗೆ ಚರ್ಚ್ ಧರ್ಮಗುರು ಫಾ.ನೆಲ್ಸನ್ ಓಲಿವೆರಾ ಅರವರು ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದರು. ಈ ಸಂದರ್ಭದಲ್ಲಿ ಧರ್ಮಗುರು ಫಾ.ನೆಲ್ಸನ್ ರವರು ಪ್ರಾಯಸ್ಥ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದೆ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.  ಈ ಸಂದರ್ಭ ಮಾತಿಗೆ ಮಾತು ಬೆಳೆದು ವೃದ್ದ ದಂಪತಿ ಮನೆಯ ಗೇಟಿಗೆ ಬೀಗ ಹಾಕಿ ಪಾದ್ರಿ ಕಾರನ್ನು ಕೋಮಡು ಹೋಗಲು ತಡೆದಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು  ವೃದ್ದನ ಕಾಲರ್ ಹಿಡಿದು ಮಾರುದ್ಧ ದೂರ ಎಳೆದುಕೊಂಡು ಹೋಗಿ ಮರದ ಕೋಲಿನಿಂದ ಹೊಡೆಯುತ್ತಿರುವುದು ಜೊತೆಗೆ ತಾಯಿ ಸಮಾನಾದ ವೃದ್ದೆಗೆ ಕಾಲಿನಿಂದ ಒದೆಯುವ ದೃಶ್ಯ ಕೂಡ  ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

  ತನ್ನ ತಂದೆ-ತಾಯಿ ಸಮಾನವಾದ ದಂಪತಿಗೆ ಪಾದ್ರಿ ನೆಲ್ಸನ್ ರವರು ತೋರಿದ ಅತಿರೇಕದ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಪಾದ್ರಿ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಧರ್ಮ ಗುರು ಮೇಲೆ ಈ ಹಿಂದೆ ಕೂಡ ದೂರು ದಾಖಲಾಗಿದೆ ಎಂದು ಹೇಳಲಾಗಿದೆ. ದೇವರ ಧೂತರೆಂದೇ ಹೇಳಲಾಗುತ್ತಿರುವ ಈ ಚರ್ಚ್ ಪಾದ್ರಿಗಳೇ ಈ ರೀತಿಯ ಅತಿರೇಖದ ವರ್ತನೆ ತೋರಿದರೆ ಇನ್ನು ಜನಸಾಮಾನ್ಯ ಜನರ ಗತಿಯೇನು ಎಂದು ಜನರಾಡಿಕೊಳ್ಳುತ್ತಿದ್ದಾರೆ.

  CCTV VIDEO

   

   

  Share Information
  Advertisement
  Click to comment

  You must be logged in to post a comment Login

  Leave a Reply