DAKSHINA KANNADA
ಶಾಸಕ ಅಶೋಕ ಕುಮಾರ್ ರೈ ನೇತೃತ್ವದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೃಹತ್ ಕರಸೇವೆ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಪುತ್ತೂರು ಫೆಬ್ರವರಿ 11: ಪುತ್ತೂರು ಮಹಾಲಿಂಗೇಶ್ವರ ದೇವಸ್ಥನದ ಅಭಿವೃದ್ದಿಗಾಗಿ ದೇವಸ್ಥಾನದ ಸುತ್ತಮುತ್ತಲಿನ ಮನೆಗಳಲ್ಲಿ ನೆಲಸಮ ಮಾಡಲಾಗಿದ್ದು, ಇದೀಗ ಆ ಜಾಗದಲ್ಲಿ ಕರಸೇವೆ ನಡೆಸಲಾಗಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯುತ್ತಿರುವ ಕರಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು, ದೇವಸ್ಥಾನದ ಅಭಿವೃದ್ಧಿಗಾಗಿ ಸುಮಾರು ಏಳು ಮನೆಗಳನ್ನು ನೆಲಸಮ ಮಾಡಲಾಗಿತ್ತು, ಇಂದು ಇದೇ ಜಾಗದಲ್ಲಿ ಕರಸೇವೆ ನಡೆಸಿದ ಭಕ್ತರು, ನೆಲಸಮ ಮಾಡಿದ ಮನೆಗಳಲ್ಲಿ ಉಳಿದ ವಸ್ತುಗಳನ್ನು ಬೆರೆಡೆ ಸ್ಥಳಾಂತರಿಸಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಈ ವೇಳೆ ಶಾಸಕ ಅಶೋಕ್ ಕುಮಾರ್ ರೈ ಸ್ವತಹ ಬಾಗವಹಿಸಿ ಹಳೆಯ ಮನೆಯೊಂದರ ಹಂಚು ತೆಗೆಯಲು ಸಹಕರಿಸಿದ್ದಾರೆ.