DAKSHINA KANNADA
ಅಂಗಡಿಯಲ್ಲೇ ನೇಣಿಗೆ ಶರಣಾದ ಚೈತ್ರಾ ಇಲೆಕ್ಟ್ರಾನಿಕ್ಸ್ ಮಾಲಕ ರಮೇಶ್

ಪುತ್ತೂರು ಎಪ್ರಿಲ್ 29: ಪುತ್ತೂರಿನ ದರ್ಬೆಯಲ್ಲಿರುವ ಚೈತ್ರಾ ಇಲೆಕ್ಟ್ರಾನಿಕ್ಸ್ ಅಂಗಡಿಯ ಮಾಲಕ ರಮೇಶ್ ತನ್ನ ಅಂಗಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮೇಶ್ ರವರು ದರ್ಬೆಯ ಲಿಟ್ಲ್ ಫ್ಲವರ್ ಶಾಲೆಯ ಬಳಿ ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಅನ್ನು ಹೊಂದಿದ್ದು, ಇಂದು ತಮ್ಮ ಅಂಗಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮೇಶ್ ಜೇಸಿಐನ ಸಕ್ರೀಯ ಸದಸ್ಯರಾಗಿದ್ದು, ಎಂದೂ ಲವಲವಿಕೆಯಿಂದ ಇರುತ್ತಿದ್ದ ರಮೇಶ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
