Connect with us

    DAKSHINA KANNADA

    ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪುತ್ತೂರು ಮುಸ್ಲಿಂ ಒಕ್ಕೂಟ ಮನವಿ….

    ಪುತ್ತೂರು ನವೆಂಬರ್ 25:ಪುತ್ತೂರಿನಲ್ಲಿ ನಡೆದ ವಿಧ್ಯಾರ್ಥಿಗಳ ಗಲಾಟೆ ಪ್ರಕರಣ ದಿನದಿಂದ ದಿನಕ್ಕೆ ಕಂಗಂಟಾಗುತ್ತಿದ್ದು, ಇದೀಗ ಪುತ್ತೂರು ಕೊಂಬೆಟ್ಟು ಸರಕಾರಿ ಪಿಯು ಕಾಲೇಜಿನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಪುತ್ತೂರು ಮುಸ್ಲಿಂ ಒಕ್ಕೂಟ ಪೋಲೀಸರಿಗೆ ಮನವಿ ಮಾಡಿದೆ.


    ಈ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಒಕ್ಕೂಟದ ಸಂಚಾಲಕ ಅಶ್ರಫ್ ಕಲ್ಲೇಗ ವಿದ್ಯಾರ್ಥಿಗಳನ್ನು ಈ ರೀತಿಯ ಹಲ್ಲೆಗೆ ಪ್ರಚೋದಿಸುವವರ ವಿರುದ್ಧವೂ ಕಾನೂನು ಕೈಗೊಳ್ಳಬೇಕೆಂದು ಪೋಲೀಸರನ್ನು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕಾಲೇಜುಗಳಲ್ಲಿ ಇಂಥಹ ಅಹಿತಕರ ಘಟನೆ ನಡೆದ ಸಂದರ್ಭದಲ್ಲಿ ಮುಸ್ಲಿಂ ಒಕ್ಕೂಟ ಈ ಕುರಿತು ಕಾನೂನಾತ್ಮಕ ಹೋರಾಟವನ್ನೂ ಮಾಡಿತ್ತು. ಮಕ್ಕಳಿಗೆ ಈ ರೀತಿಯ ಘಟನೆಯಿಂದ ಮುಂದೆ ಅನುಭವಿಸಬೇಕಾದ ಕಷ್ಟಗಳ ಬಗ್ಗೆ ಅರಿವಿಲ್ಲ.

    ಮುಂದೆ ಮಕ್ಕಳ ಭವಿಷ್ಯ ಹಾಗೂ ಉದ್ಯೋಗಕ್ಕೂ ಈ ಘಟನೆಗಳು ಸಮಸ್ಯೆ ತಂದೊಡ್ಡಲಿದೆ ಎನ್ನುವ ಮನವಿಯನ್ನೂ ಪೋಲೀಸರಿಗೆ ಮಾಡಲಾಗಿದೆ. ಈ ಸಂಬಂಧ ಶೀಘ್ರವೇ ಕಾಲೇಜುಗಳಲ್ಲಿ ಶಾಂತಿ‌ಸಭೆಗಳನ್ನು ನಡೆಸುವ ಭರವಸೆಯನ್ನು ಪೋಲೀಸ್‌ ಇಲಾಖೆ ನೀಡಿದೆ ಎಂದು ಅಶ್ರಫ್‌ ಕಲ್ಲೇಗ ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *