Connect with us

DAKSHINA KANNADA

ಜನವರಿ 9 ರಂದು ಪುತ್ತೂರಿನಲ್ಲಿ ವಿವಿಧ ಇಲಾಖೆಗಳ ಬಾಂಧವ್ಯ ಕ್ರಿಕೆಟ್ ಪಂದ್ಯಾಟ….

ಪುತ್ತೂರು ಜನವರಿ 04: ವಿವಿಧ ಇಲಾಖೆಗಳನ್ನು ಸೇರಿಸಿಕೊಂಡು ನಡೆಸುವ ಬಾಂಧವ್ಯ ಟ್ರೋಫಿ ಕ್ರಿಕೆಟ್ ಪಂದ್ಯಾಟವು ಪುತ್ತೂರಿನ ವಿವೇಕಾನಂದ ಕ್ರೀಡಾಂಗಣದಲ್ಲಿ ಜನವರಿ 9 ರಂದು ನಡೆಯಲಿದೆ. ಬಾಂಧವ್ಯ ಫ್ರೆಂಡ್ಸ್ ಮತ್ತು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಈ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.


ಪೋಲೀಸ್ ಇಲೆವನ್, ಲಾಯರ್ಸ್ ಇಲೆವನ್, ಕಂದಾಯ ಇಲಾಖೆ ಇಲೆವೆನ್, ಪುತ್ತೂರು ಪ್ರೆಸ್ ಇಲೆವನ್, ಫಾರೆಸ್ಟ್ ಇಲೆವನ್ ಸೇರಿದಂತೆ 16 ತಂಡಗಳು ಈ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿವೆ. ಪಂದ್ಯಾಟದ ಉದ್ಘಾಟನೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ವಹಿಸಲಿದ್ದಾರೆ.

ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಪುತ್ತೂರು ಪ್ರಭಾರ ಡಿವೈಎಸ್ಪಿ ಧನ್ಯ ಕುಮಾರಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಭಾಗವಹಿಸಲಿದ್ದಾರೆ.

Advertisement
Click to comment

You must be logged in to post a comment Login

Leave a Reply