LATEST NEWS
ಪುತ್ತೂರು: ರೋಟರಿಪುರ ನಿವಾಸಿ ಜಗದೀಶ್ ಭಟ್ ನೇಣು ಬಿಗಿದು ಆತ್ಮಹತ್ಯೆ.

ಪುತ್ತೂರು, ಆಗಸ್ಟ್ 17: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.17 ರಂದು ರೋಟರಿಪುರದಲ್ಲಿ ನಡೆದಿದೆ.
ಮೃತರನ್ನು ರೋಟರಿಪುರ ನಿವಾಸಿ ಜಗದೀಶ್ ಭಟ್ (42) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಜಗದೀಶ್ ರವರು ಅನಾರೋಗ್ಯದಿಂದಿದ್ದು, ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಮೃತರು ಓರ್ವ ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಪುತ್ತೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ.
Continue Reading