Connect with us

    DAKSHINA KANNADA

    ಪುತ್ತೂರಿನ ಯೂನಿಯನ್ ಕ್ಲಬ್ ಗೆ ಪೊಲೀಸ್ ದಾಳಿ – ಇಸ್ಪಿಟ್ ಜೂಜಾಟದಲ್ಲಿ ನಿರತರಾಗಿದ್ದ 15 ಜನರ ಬಂಧನ

    ಪುತ್ತೂರು,ಅಕ್ಟೋಬರ್ 26:  ಪುತ್ತೂರಿನ ಟೌನ್ ಬ್ಯಾಂಕ್ ಬಳಿ ಕಾರ್ಯಾಚರಿಸುತ್ತಿದ್ದ ಪ್ರತಿಷ್ಠಿತ ಯೂನಿಯನ್ ಕ್ಲಬ್ ಗೆ ಪುತ್ತೂರು ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದು ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟದಲ್ಲಿ ನಿರತರಾಗಿದ್ದ 15 ಜನರನ್ನು ಬಂಧಿಸಿದ್ದಾರೆ.

    ಪುತ್ತೂರು ಎ.ಎಸ್.ಪಿಯವರ ನಿರ್ದೇಶನದಂತೆ ಪುತ್ತೂರು ನಗರ ಠಾಣೆ ಇನ್ಸ್’ಪೆಕ್ಟರ್ ಗೋಪಾಲ ನಾಯ್ಕ ರವರ ನೇತ್ರತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕ್ಲಬ್ ನೊಂದಾಯಿತ ಕ್ಲಬ್ ಆಗಿದ್ದರೂ ಅಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ ಒಂದಷ್ಟು ಮಂದಿ ಇಸ್ಪಿಟ್ ಆಟದಲ್ಲಿ ನಿರತರಾಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದ್ದು, ಜೂಜಾಟದಲ್ಲಿ ತೊಡಗಿಸಿದ್ದಾರೆ ಎನ್ನಲಾದ ಸುಮಾರು 1.58,860 ರೂಪಾಯಿಯಷ್ಟು ಹಣವನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.

    ಸ್ಥಳದಿಂದ 4 ಮರದ ಟೇಬಲ್, 14 ಮರದ ಚೇಯರ್, ಮೊಬೈಲ್ಗಳು ಮತ್ತು 2 ಮದ್ಯದ ಬಾಟಲ್ಗಳನ್ನು ವಶಪಡಿಸಲಾಗಿದ್ದು , 15 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಯಲ್ಲಿ ಪಿ. ಯಸ್. ಐ. ಜಂಬುರಾಜ್, ಎ. ಯಸ್. ಐ. ಲೋಕನಾಥ್, ಹೆಡ್ ಕಾನ್ಸ್ಟೇಬಲ್ಗಳಾದ ಜಯರಾಮ್, ಕೃಷ್ಣಪ್ಪ, ಜಗದೀಶ್, ಬಸವರಾಜ್, ಶ್ರೀ ಶೈಲ, ಲಕ್ಷ್ಮೀಶ ಪಾಲ್ಗೊಂಡಿದ್ದರು. ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *