DAKSHINA KANNADA
ಪುತ್ತೂರಿನಲ್ಲಿ ಪಿಎಫ್ಐ ಮುಖಂಡ ಪೋಲೀಸ್ ವಶ, ಪ್ರತಿಬಂಧಕ ಕಾಯ್ದೆಯಡಿ ವಶಕ್ಕೆ…
ಪುತ್ತೂರು, ಸೆಪ್ಟೆಂಬರ್ 27: ರಾಜ್ಯದಾದ್ಯಂತ ಇಂದು ಕೂಡಾ ಪೋಲೀಸರು ಪ್ರತಿಬಂಧಕ ಕಾಯ್ದೆಯಡಿ ಹಲವು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವ್ಯಾಪ್ತಿಯಿಂದ ಒಟ್ಟು ನಾಲ್ವರು ಪಿಎಫ್ಐ ಮುಖಂಡರನ್ನು ಪೋಲೀಸರು ಇಂದು ವಶಕ್ಕೆ ಪಡೆದಿದ್ದು, ನಾಲ್ವರನ್ನೂ ಆಯಾಯ ತಾಲೂಕು ದಂಡಾಧಿಕಾರಿಯಾಗಿರುವ ತಹಶೀಲ್ದಾರ್ ಮುಂದೆ ಹಾಜರುಪಡಿಸಲಾಗಿದೆ.
ದೇಶದಲ್ಲಿ ನಡೆದ ಪಿಎಫ್ಐ ಮುಖಂಡರ ಬಂಧನ ಖಂಡಿಸಿ , ಸಮಾಜದಲ್ಲಿ ಶಾಂತಿಭಂಗಕ್ಕೆ ಯತ್ನ ನಡೆಸುವ ಹಿನ್ಮಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಪಿಎಫ್ಐ ಪುತ್ತೂರು ತಾಲೂಕು ಅಧ್ಯಕ್ಷ ಜಾಬೀರ್ ಅರಿಯಡ್ಕ ರನ್ನು ಪೋಲೀಸರು ವಶಕ್ಕೆ ಪಡೆದಿದ್ದು, ಪ್ರತಿಬಂಧಕ ಕಾಯ್ದೆಯ ಗರಿಷ್ಠ ಅವಧಿಯ ಮುಚ್ಚಳಿಕೆಗಾಗಿ ತಹಶೀಲ್ದಾರ್ ಮುಂದೆ ಹಾಜರುಪಡಿಸಲಾಗಿದೆ