DAKSHINA KANNADA
ಪುತ್ತೂರು : ನಕಲಿ ಆಧಾರ್ ಕಾರ್ಡ್ ದಂಧೆಯಲ್ಲಿಅಧಿಕಾರಿ ಶಾಮೀಲು ಆರೋಪ, ಕ್ರಮಕ್ಕೆ ಆಗ್ರಹ..!

ಪುತ್ತೂರು : ನಕಲಿ ಹೆಸರಲ್ಲಿ ಆಧಾರ್ ಕಾರ್ಡ್ ಮಾಡಿಕೊಡುವ ದಂಧೆಯಲ್ಲಿ ಸರ್ಕಾರಿ ಅಧಿಕಾರಿ ಶಾಮೀಲು ಆಗಿದ್ದು ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಪಾಸ್ಕಲ್ ಡೊನಾಲ್ಡ್ ಪಿಂಟೋ ಆಗ್ರಹಿಸಿದ್ದಾರೆ.
ಅಧಿಕೃತ ದಾಖಲೆ ಪರಿಶೀಲಿಸದೆ ದೃಢೀಕರಣ ಪತ್ರ ನೀಡಿದ ಪುತ್ತೂರು ಸರಕಾರಿ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಸಿ. ಯೋಗಾನಂದ ವಿರುದ್ದ ಈ ಆರೋಪ ಮಾಡಿದ್ದಾರೆ.ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಿ . ಯೋಗಾನಂದ ಅವರು ಸ್ವತಃ ತನ್ನ ಪತ್ನಿಯ ಹೆಸರನ್ನೇ ಆಧಾರ್ ಕಾರ್ಡ್ ನಲ್ಲಿ ಬದಲಾಯಿಸಿದ್ದಾರೆ. ಲಿಲ್ಲಿ ಮೇರಿ ರೋಡ್ರಿಗಸ್ ಎಂದಿದ್ದ ಹೆಸರನ್ನು ಪ್ರಮಿಳಾ ಎಂದು ಬದಲಾಯಿದ್ದಾರೆ. ಅಲ್ಲದೆ ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್ ಕೂಡಾ ಮಾಡಿಕೊಡುವ ದಂಧೆಯಲ್ಲಿ ಈ ಅಧಿಕಾರಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆಯಾದ್ರೂ ಈ ಹಿರಿಯ ಆಧಿಕಾರಿಗಳು ಈ ಸೂಕ್ಷ್ಮ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ ಎಂದರು. ಇದೇ ಅಲ್ಲದೆ ಕೇರಳದವರಿಗೂ ಈ ರೀತಿ ನಕಲಿ ಆಧಾರ್ ಕಾರ್ಡ್ ತಯಾರಿಸಿ ಕೊಡುವ ಕೆಲಸವನ್ನುಯೋಗಾನಂದ ಮಾಡಿದ್ದಾರೆ. ಈ ರೀತಿ ನಕಲಿ ಆಧಾರ್ ಕಾರ್ಡ್ ಗಳು ಭಯೋತ್ಪಾದಕ ಕೃತ್ಯಕ್ಕೂ ಬಳಕೆಯಾಗುವ ಸಾಧ್ಯತೆಯಿದೆ. ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಪಾಸ್ಕಲ್ ಪಿಂಟೋ ಒತ್ತಾಯಿಸಿದ್ದಾರೆ.
