Connect with us

  DAKSHINA KANNADA

  ಪ್ರಧಾನಿ ಮೋದಿ ಹಲವು ಭಾರಿ ಜಿಲ್ಲೆಗೆ ಆಗಮಿಸಿದ್ದಾರೆ…ಆದರೆ ಇಷ್ಟರತನಕ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ

  ಪುತ್ತೂರು ಎಪ್ರಿಲ್ 16: ಚುನಾವಣೆ ಬಂದಾಗ ಪ್ರಧಾನಿ ನರೇಂದ್ರ ಮೋದಿಗೆ ನಾರಾಯಣ ಗುರುಗಳ ಧ್ಯಾನ ಮಾಡುತ್ತಿದ್ದು, ಈ ಮೂಲಕ ಬಿಲ್ಲವರನ್ನು ಓಲೈಸುವ ತಂತ್ರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ವ್ಯಂಗ್ಯವಾಡಿದ್ದಾರೆ.


  ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಮಳ ರಾಮಚಂದ್ರ ಗಣರಾಜ್ಯೋತ್ಸವ ದಿನದಂದು ಎರಡು ಬಾರಿ ನಾರಾಯಣ ಗುರುಗಳ ಸ್ರಬ್ಧಚಿತ್ರಕ್ಕೆ ಅವಕಾಶ ನೀಡದೆ ಅವಮಾನ ಮಾಡಲಾಗಿದೆ. ಅಲ್ಲದೆ ಪಠ್ಯ ಪುಸ್ತಕದಿಂದ ಉದ್ಧೇಶಪೂರ್ವಕವಾಗಿ ನಾರಾಯಣ ಗುರುಗಳ ಪಠ್ಯವನ್ನು ಬಿಜೆಪಿ ಕೈಬಿಟ್ಟಿತ್ತು. ಅಲ್ಲದೆ ಪ್ರಧಾನಿ ಮೋದಿ ಹಲವು ಬಾರಿ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ, ಆದರೆ ಇಷ್ಟರತನಕ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ, ಆದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಬಿಜೆಪಿಗೆ ಖಚಿತವಾಗಿದೆ ಬೆನ್ನಲ್ಲೇ ಇದೀಗ ಸೋಲಿನ ಭೀತಿಯಿಂದ ಪಾರಾಗಲು ಪ್ರಧಾನಿಯಿಂದ ರೋಡ್ ಶೋ ಮಾಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ವ್ಯಂಗ್ಯವಾಡಿದ್ದಾರೆ. ಪದ್ಮರಾಜ್ ನಾರಾಯಣ ಗುರುಗಳ ಸೇವೆಯನ್ನು ನಿರಂತರ ಮಾಡುತ್ತಿದ್ದಾರೆ. ಈ ಬಾರಿ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಗೆಲುವು ನಿಶ್ಚಿತ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply