Connect with us

    BANTWAL

    ಪುತ್ತೂರು : ಕೊಲೆಯಾದ ಗೌರಿ ಮನೆಗೆ ಕೇಂದ್ರ ಸಚಿವರೊಂದಿಗೆ ಸಂಸದ ಕಟೀಲ್ ಭೇಟಿ..!

    ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಗುರುವಾರ ಯುವಕನ ಚೂರಿ ಇರಿತಕ್ಕೆ ಬಲಿಯಾದ ಯವತಿ ಗೌರಿಯ ಅಳಿಕೆ ಗ್ರಾಮದ ಕುದ್ದುಪದವು ಆದಾಳ ಮನೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಭಗವಂತ್ ಖೂಬಾ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಮುಖಂಡರೊಂದಿಗೆ ಶುಕ್ರವಾರ ಭೇಟಿ ನೀಡಿದರು.

    ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಗುರುವಾರ ಯುವಕನ ಚೂರಿ ಇರಿತಕ್ಕೆ ಬಲಿಯಾದ ಯವತಿ ಗೌರಿಯ ಅಳಿಕೆ ಗ್ರಾಮದ ಕುದ್ದುಪದವು ಆದಾಳ ಮನೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಭಗವಂತ್ ಖೂಬಾ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಮುಖಂಡರೊಂದಿಗೆ ಶುಕ್ರವಾರ ಭೇಟಿ ನೀಡಿದರು.

    ಗೌರಿ ತಾಯಿಯನ್ನು ಕಂಡು ಸಾಂತ್ವಾನ ಹೇಳಿದ ಗಣ್ಯರು ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.

    ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಜಿಲ್ಲಾ ಕಾರ್ಯದರ್ಶಿ ರಂದೀಪ್ ಕಾಂಚನ್ ಮತ್ತಿತರ ಮುಖಂಡರುಗಳು ಈ ಸಂದರ್ಭ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply