DAKSHINA KANNADA
ಪುತ್ತೂರು ಶಾಸಕರು ಮಹಿಳೆ ಜೊತೆ ಇರುವಂತಹ ಫೋಟೋ ಬಗ್ಗೆ ಜನತೆಗೆ ಸ್ಪಷ್ಟನೆ ನೀಡಬೇಕು: ಅಮಳ ರಾಮಚಂದ್ರ

ಪುತ್ತೂರು, ಎಪ್ರಿಲ್ 10: ಪುತ್ತೂರು ಶಾಸಕರು ಮಹಿಳೆ ಜೊತೆ ಇರುವಂತಹ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಶಾಸಕರು ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಕೆ.ಪಿ.ಸಿ.ಸಿ ವಕ್ತಾರ ಅಮಳ ರಾಮಚಂದ್ರ ಒತ್ತಾಯಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ದಿನಗಳ ಹಿಂದೆ ಈ ಫೋಟೋಗಳು ವೈರಲ್ ಆಗಿದ್ದು,ಈ ಫೋಟೋವಿಗೂ, ಶಾಸಕರಿಗೂ ಇರುವ ಸಂಬಂಧವೇನು ಅನ್ನೋದನ್ನು ಶಾಸಕರು ಜನರಿಗೆ ತಳಿಸಬೇಕು.

ಮಾತೆತ್ತಿದರೆ ಮಹಿಳೆಯರನ್ನು ಮಾತೆ ಎನ್ನುವ ಬಿಜೆಪಿಗರ ಹಣೆಬರಹ ಎಂ.ಪಿ.ರೇಣುಕಾಚಾರ್ಯರಿಂದ ಹಿಡಿದು ಪುತ್ತೂರು ಶಾಸಕರ ವರೆಗಿನ ಫೋಟೋ ತನಕ ಬೀದಿಗೆ ಬಂದಿದೆ. ಈ ಫೋಟೋದ ಸತ್ಯಾಸತ್ಯತೆಯನ್ನು ಪೋಲೀಸರು ತನಿಖೆಯಲ್ಲಿ ಬಹಿರಂಗಪಡಿಸಬೇಕು.
ಶಾಸಕರೇ ತಮ್ಮ ಆಪ್ತರಲ್ಲಿ ಹೇಳಿಕೊಂಡಂತೆ ಈ ಫೋಟೋಗಳನ್ನು ಬಿಜೆಪಿಯಲ್ಲಿರುವ ಅವರ ರಾಜಕೀಯ ವಿರೋಧಿಗಳೇ ಮಾಡಿದ್ದು, ಓರ್ವ ಮಹಿಳೆಯನ್ನು ಅವಮಾನ ಮಾಡಿದ ಇಂಥಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.