DAKSHINA KANNADA
ಪುತ್ತೂರಿನ ಶಾಸಕರು ತಾನು ನಿಜವಾದ ಕಾಂಗ್ರೇಸಿಗ ಅನ್ನೋದನ್ನು ಜನರಿಗೆ ತೋರಿಸಬೇಕು: ಬಿ.ಎಂ.ಭಟ್

ಪುತ್ತೂರು, ಜೂನ್ 06: ಬಿಜೆಪಿ ಮತಗಳು ಎರಡು ಭಾಗವಾದ ಕಾರಣ ಕಾಂಗ್ರೇಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ಹೇಳಿದ್ದಾರೆ.
ಬಿಜೆಪಿ ಮತ ಒಡೆದ ಕಾರಣ ಕಾಂಗ್ರೇಸ್ ಗೆ ಲಾಭವಾಗಿದೆ, ಈ ಅವಕಾಶವನ್ನು ಪುತ್ತೂರಿನ ಕಾಂಗ್ರೆಸ್ ಶಾಸಕ ಉಪಯೋಗಿಸಿಕೊಳ್ಳಬೇಕು, ತಾನು ನಿಜವಾದ ಕಾಂಗ್ರೇಸಿಗ ಅನ್ನೋದನ್ನು ಜನರಿಗೆ ತೋರಿಸಬೇಕು. ಬಿಜೆಪಿಯ ತಪ್ಪು ನೀತಿ, ಧೋರಣೆಗಳನ್ನು ಖಂಡಿಸಬೇಕು.

ಆ ಮೂಲಕ ತಾನು ಬಡವರ ಪರ ಇದ್ದೇನೆ ಅನ್ನೋದನ್ನು ತೋರಿಸಬೇಕು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಕೋಮು ಭಾವನೆ ಮೂಡಿಸುವ ಕೆಲಸ ನಡೆಯುತ್ತಿದೆ. ಸಣ್ಣ ವಿಚಾರವನ್ನೂ ದೊಡ್ಡದು ಮಾಡಲಾಗುತ್ತಿದೆ. ಇದನ್ನು ವಿರೋಧಿಸಲು ಜಿಲ್ಲೆಯಲ್ಲಿ ಇಬ್ಬರೇ ಕಾಂಗ್ರೆಸ್ ಶಾಸಕರು ಇರೋದು, ಪುತ್ತೂರಿನ ಶಾಸಕರು ಇವುಗಳನ್ನು ವಿರೋಧಿಸಿ ಕಾಂಗ್ರೆಸ್ ಶಾಸಕ ತಾನು ಎಂದು ತೋರಿಸಿಕೊಡಬೇಕು ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ಹೇಳಿದ್ದಾರೆ.