Connect with us

DAKSHINA KANNADA

ಕೋಮುವಾದಿ,ಮತಾಂಧ ಮತ್ತು ಭಯೋತ್ಪಾದಕರ ರಕ್ತ ಒಂದೇ: ಬಿ.ಎಂ.ಭಟ್

Share Information

ಪುತ್ತೂರು, ಜೂನ್ 06: ಮಣಿಪುರದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಮೇಲಿನ ದಾಳಿಯನ್ನು ಖಂಡಿಸಿ ಸಿಐಟಿಯು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರು ಮಿನಿ ವಿಧಾ‌ನಸೌಧದ ಮುಂಭಾಗದಲ್ಲಿ ಜೂನ್ 6 ರಂದು‌ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಬಿ.ಎಂ.ಭಟ್ ಮಣಿಪುರದಲ್ಲಿ ಕಳೆದ ಒಂದು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದ್ದು, ಸಾವಿರಾರು ಕುಟುಂಬಗಳು ತಮ್ಮ ಮನೆ-ಮಠ ಬಿಟ್ಟು ಓಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಮಣಿಪುರ ರಾಜ್ಯದಲ್ಲಿ ಕರ್ಫೂ ಹೇರಲಾಗಿದ್ದು, ಕರ್ಫೂ ಹೇರಿದರೆ ಜನಸಾಮಾನ್ಯರಿಗೆ ಯಾವ ರೀತಿ ತೊಂದರೆಯಾಗುತ್ತದೆ ಎನ್ನೋದು ಕೋಮುವಾದಿಗಳ ಕೇಂದ್ರವಾಗಿರುವ ದಕ್ಷಿಣಕನ್ನಡ ಜಿಲ್ಲೆಯ ಜನಕ್ಕೆ ಚೆನ್ನಾಗಿ ಗೊತ್ತಿದೆ.

ಮಣಿಪುರದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡಿದರೆ, ದೆಹಲಿಯಲ್ಲಿ ಬಿಜೆಪಿ ಎಂ.ಪಿ ಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಕ್ರೀಡಾಪಟುವಿಗೆ ನ್ಯಾಯ ಕೊಡುವಂತೆ ಹೋರಾಟ ಮಾಡಿದವರ ಮೇಲೆ ಪೋಲೀಸರಿಂದ ದೌರ್ಜನ್ಯ ನಡೆಸಲಾಗಿದ್ದು, ಈ ಎಲ್ಲಾ ಘಟನೆಗಳಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಾರಣ ಎಂದು ಆರೋಪಿಸಿದರು. ಪುತ್ತೂರಿನಲ್ಲಿ ಇತ್ತೀಚೆಗೆ ಹಿಂದುತ್ವದ ವಿಚಾರದಲ್ಲಿ ವಾದ ನಡೆಯುತ್ತಿದೆ‌.

ಕಮ್ಯುನಿಷ್ಟರು ಹಿಂದುತ್ವದ ವಿರುದ್ಧವಾಗಿ ಮಾತನಾಡಿದರೆ, ಇಂದು ಹಿಂದುತ್ವವಾದಿಗಳೇ ಪರಸ್ಪರ ಕಚ್ಚಾಡುತ್ತಿದ್ದಾರೆ. ನಿನ್ನ ಹಿಂದುತ್ವ ಸರಿಯಿಲ್ಲ ಎನ್ನುವ ರೀತಿಯಲ್ಲಿ ಎರಡು ಗುಂಪುಗಳು ಚರ್ಚೆ ನಡೆಸುತ್ತಿದೆ. ಕೋಮುವಾದಿ,ಮತಾಂಧ‌ ಮತ್ತು ಭಯೋತ್ಪಾದಕರ ಈ ಮೂರು ಜನರ ರಕ್ತವೂ ಒಂದೇ ಎಂದ ಅವರು ದೇಶದಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು,ಜಿಲ್ಲೆಯಲ್ಲಿ ಕೋಮುಗಲಭೆ ನಡೆಸಲು ಕೆಲವರು ಕಾದು ಕಾಯುತ್ತಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.


Share Information
Advertisement
Click to comment

You must be logged in to post a comment Login

Leave a Reply