DAKSHINA KANNADA
ಶಾಸಕರ ಮನೆ ಹಾಲು ದಲಿತ ಕಾಲನಿಗೆ ವಿತರಣೆ
ಪುತ್ತೂರು, ಮಾರ್ಚ್ 30: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ದೇಶವ್ಯಾಪಿ ವ್ಯವಹಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೆ.ಎಮ್.ಎಫ್ ಹಾಲು ಸಂಗ್ರಹ ಸ್ಥಗಿತಗೊಳಿಸಿತ್ತು.
ಇದನ್ನು ಗಮನಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ತನ್ನ ಮನೆಯಿಂದ ಡೈರಿಗೆ ಕೊಡುವ ಹಾಲನ್ನು ಪುತ್ತೂರು ನಗರಸಭೆ ವ್ಯಾಪ್ತಿಯ ನೆಲ್ಲಿಗುಂಡಿ ದಲಿತ ಕಾಲೋನಿಗಳಿಗೆ ಉಚಿತವಾಗಿ ನೀಡಿದರು.
ಕೆಎಮ್‌ಎಫ್ ಹಾಲು ಸಂಗ್ರಹ ಸ್ಥಗಿತಗೊಳಿಸಿದ್ದರಿಂದ ಹೈನುಗಾರರು ಡೈರಿಗೆ ಹಾಲನ್ನು ಹಾಕಲು ಸಾಧ್ಯವಾಗದೆ ಶಾಸಕರ ವಾರ್‌ರೂಮ್ ಮೂಲಕ ಹಾಲು ವಿತರಣೆ ಮಾಡುತ್ತಿದ್ದರು.
ಇದೀಗ ಸ್ವತಃ ಹೈನುಗರಿಕೆ ಕಾಯಕದಲ್ಲಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು ಸುಮಾರು ೧೦ ಲೀಟರ್ ಹಾಲನ್ನು ನೆಲ್ಲಿಗುಂಡಿ ಕಾಲೋನಿ ನಿವಾಸಿಗಳಿಗೆ ಉಚಿತವಾಗಿ ನೀಡಿದರು.
ಸಂಕಷ್ಟದಲ್ಲಿ ನೆರವಾದ ಶಾಸಕರ ಈ ನಡೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.