Connect with us

MANGALORE

ಸದ್ಯಕ್ಕೆ ಮಂಗಳೂರು ಕೇರಳ ಹೆದ್ದಾರಿ ಓಪನ್ ಆಗಲ್ಲ – ವಿಶೇಷ ನೊಡೆಲ್ ಆಫೀಸರ್ ವಿ.ಪೊನ್ನುರಾಜ್

ಸದ್ಯಕ್ಕೆ ಮಂಗಳೂರು ಕೇರಳ ಹೆದ್ದಾರಿ ಓಪನ್ ಆಗಲ್ಲ – ವಿಶೇಷ ನೊಡೆಲ್ ಆಫೀಸರ್ ವಿ.ಪೊನ್ನುರಾಜ್

ಮಂಗಳೂರು ಮಾರ್ಚ್ 28: ಮಂಗಳೂರು -ಕೇರಳ ಹೆದ್ದಾರಿ ಓಪನ್ ಆಗಿಲ್ಲ ಕೇಂದ್ರ ಸರ್ಕಾರ ಹೆದ್ದಾರಿ ತೆರವುಗೊಳಿಸುವ ಬಗ್ಗೆ ಮಾಹಿತಿ ಕೇಳಿದೆ , ಆದ್ರೆ ಸದ್ಯಕ್ಕೆ ಕೇರಳ ರಾಜ್ಯಕ್ಕೆ ಸಂಪರ್ಕ ಅಸಾಧ್ಯ ಎಂದು ದಕ್ಷಿಣಕನ್ನಡ ಜಿಲ್ಲೆಯ ಕೊರೊನಾ ವಿಶೇಷ ನೊಡೆಲ್ ಆಫೀಸರ್ ವಿ.ಪೊನ್ನುರಾಜ್ ಸ್ಪಷ್ಟಪಡಿಸಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇರಳ ಕರ್ನಾಟಕ ಗಡಿ ಭಾಗ ರಸ್ತೆ ಸಂಪರ್ಕವನ್ನು ಓಪನ್ ಮಾಡಬೇಕೆಂದು ವಿನಂತಿಸಿಕೊಂಡ ಬೆನ್ನಲೆ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರು ಕೇರಳ ಹೆದ್ದಾರಿ ಓಪನ್ ಆಗಿದೆ ಎಂದು ಬರಲಾರಂಬಿಸಿದ್ದು,

ಇದಕ್ಕೆ ಸ್ಪಷ್ಟನೆ ನೀಡಿದ ಕೊರೊನಾ ವಿಶೇಷ ನೊಡೆಲ್ ಆಫೀಸರ್ ವಿ.ಪೊನ್ನುರಾಜ್ ಸದ್ಯಕ್ಕೆ ಕೇರಳ ರಾಜ್ಯಕ್ಕೆ ಸಂಪರ್ಕ ಅಸಾಧ್ಯ ಎಂದು ತಿಳಿಸಿದ ಅವರು ಕೇರಳದಿಂದ ಅಂಬುಲೆನ್ಸ್ ಗೂ ದ.ಕ ಜಿಲ್ಲೆ ಪ್ರವೇಶವಿಲ್ಲ ಎಂದು ತಿಳಿಸಿದ್ದಾರೆ, ಕಾಸರಗೋಡಿನಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಯಾರಿಗಾದರೂ ಕೊರೊನಾ ಇದ್ದರೂ ಅಪಾಯವಾಗುತ್ತದೆ ಎಂದು ತಿಳಿಸಿದರು. ದ.ಕ ಜಿಲ್ಲೆ ಮತ್ತು ಕೇರಳದ ನಡುವೆ ೨೧ ಗಡಿಭಾಗಗಳಿವೆ ಈ ಎಲ್ಲಾ ಗಡಿಭಾಗಗಳನ್ನು ಬಂದ್ ಮಾಡಲಾಗಿದೆ ಎಂದರು

Facebook Comments

comments