Connect with us

    DAKSHINA KANNADA

    ಪುತ್ತೂರು ಅಂಗನವಾಡಿಗೆ ನುಗ್ಗಿ ಆಮ್ಲೆಟ್ ಮಾಡಿ ತಿಂದ ಕಿಡಿಗೇಡಿಗಳು..!

    ಪುತ್ತೂರು : ರಾತ್ರೋರಾತ್ರಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಮಕ್ಕಳಿಗೆ ನೀಡಲು ಇಟ್ಟಿದ್ದ ಮೊಟ್ಟೆಗಳನ್ನು ಆಮ್ಲೆಟ್ ಮಾಡಿ ತಿಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಲಿಕಟ್ಟೆಯ ಬಳಿ ನಡೆದಿದೆ.

    ಸ್ಥಳೀಯರ ಪ್ರಕಾರ ಮೊಟ್ಟೆ ಹಾಗೂ ಎಣ್ಣೆ ಹೊಡೆದು ಕಿಡಿಗೇಡಿಗಳು ತಿಂದು ಸಂಭ್ರಮಿಸಿ ಹೋಗಿರಬರಬಹುದೆಂದು ಶಂಕಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಕರ್ತವ್ಯಕ್ಕೆ ಬಂದಾಗ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದಿರುವುದನ್ನು ಗಮನಿಸಿದ್ದಾರೆ. ಅಂಗನವಾಡಿ ಪುಟಾಣಿಗಳಿಗೆಂದು ಅಡುಗೆ ಕೋಣೆಯಲ್ಲಿ ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ.ಅಷ್ಟೇ ಅಲ್ಲದೆ, ಪಕ್ಕದಲ್ಲಿರುವ ಗ್ಯಾಸ್ ಸ್ಟವ್​ ಮೇಲೆ ಬಾಣಲೆ ಇಡಲಾಗಿದ್ದು, ಅದರಲ್ಲಿ ಆಮ್ಮೆಟ್ ತುಂಡು ಪತ್ತೆಯಾಗಿದೆ.ಕಿಡಿಗೇಡಿಗಳು ಅಂಗನವಾಡಿಗೆ ನುಗ್ಗಿ ಎಣ್ಣೆ ಹೊಡೆದು ಆಮ್ಲೆಟ್ ಮಾಡಿ ತಿಂದಿರುವುದು ದೃಢಪಟ್ಟಿದೆ. ಪುತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನನೀಡಿ ಪರಿಶೀಲನೆ ನಡೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply