Connect with us

    DAKSHINA KANNADA

    ಪುತ್ತೂರು : ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಭಾಗಿಯಾಗಲು ತೆರಳಿದ್ದ ವಿದ್ಯಾರ್ಥಿಗೆ ಅನ್ಯಾಯ, ಖಾಸಾಗಿ ಕಾಲೇಜ್ ವಿರುದ್ದ ಪ್ರತಿಭಟನೆಗೆ ನಿರ್ಧಾರ

    ಪುತ್ತೂರು : ರಾಷ್ಟ್ರ ಮಟ್ಟದ ಕ್ರೀಡಾಕೂಟ ಕ್ಕೆ ಭಾಗಿಯಾಗಲು ತೆರಳಿದ್ದ ವಿದ್ಯಾರ್ಥಿ ಗೆ ಅನ್ಯಾಯ ಮಾಡಲಾಗಿದೆ ಎಂದು ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ವಿರುದ್ಧ ಮರಾಠಿ ಸಂರಕ್ಷಣಾ ಸಮಿತಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜ್ ಆಡಳಿತ ವಿರುದ್ದ ಪ್ರತಿಭಟನೆ ನಡೆಸಲು ನಿರ್ಧಾರಿಸಲಾಗಿದೆ.


    ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿರುದ್ಧ ಮರಾಠಿ ಸಂರಕ್ಷಣಾ ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ್ ಅವರು ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜಿನಿಂದ ಈ ಎಡವಟ್ಟು ಮಾಡಲಾಗಿದೆ. ಮಧ್ಯ ಪ್ರದೇಶದಲ್ಲಿ ಅಖಿಲ ಭಾರತೀಯ ವಿದ್ಯಾಭಾರತಿ ಪ್ರಾಂತೀಯ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕಿದ್ದ ವಿದ್ಯಾರ್ಥಿಯನ್ನು ಕ್ರೀಡೆಯಲ್ಲಿ ಭಾಗಿಯಾಗಲು ಮಧ್ಯಪ್ರದೇಶಕ್ಕೆ ಕಾಲೇಜು ಆಡಳಿತ ಮಂಡಳಿ ಕಳುಹಿಸಿತ್ತು.

    ಆದರೆ ಕ್ರೀಡಾಕೂಟದಲ್ಲಿ ಭಾಗಿಯಾಗಲು ಬೇಕಾದ ನೊಂದಣಿಯನ್ನೇ ಕಾಲೇಜು ಮಾಡಿರಲಿಲ್ಲ. ಮಧ್ಯಪ್ರದೇಶದ ಸತ್ನಾ ಕ್ರೀಡಾಂಗಣಕ್ಕೆ ತಲುಪಿದಾಗ ಈ ನೊಂದಣಿ ಮಾಡದ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾಲೇಜು ಸಿಬ್ಬಂದಿಗಳ ಬಳಿ ಕೇಳಿದಾಗ ಹಾರಿಕೆಯ ಮತ್ತು ಬೇಜಾಬ್ದಾರಿಯ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ ಅಶೋಕ್ ನಾಯ್ಕ್ ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply