BELTHANGADI
ಬೆಳ್ತಂಗಡಿ : ಕಿಡಿಗೇಡಿಗಳ ಅಟ್ಟಹಾಸ, ಸುನ್ನತ್ ಮಾಡಿದ ರೀತಿಯಲ್ಲಿ ಶಾಸಕ ಹರೀಶ್ ಪೂಂಜ ಫೋಟೋ ವೈರಲ್..!!!
ಬೆಳ್ತಂಗಡಿ : ಇತ್ತೀಚೆಗೆ ಕಿಡಿಗೇಡಿಗಳ ವಿಕೃತಿ ಮಿತಿ ಮೀರಿದ್ದು ಇದಕ್ಕೆ ಇದೀಗ ಮತ್ತೊಂದು ಸೇರ್ಪಡೆಯಾಗಿದ್ದು , ಸುನ್ನತ್ ಮಾಡಿದ ರೀತಿಯಲ್ಲಿ ಶಾಸಕ ಹರೀಶ್ ಪೂಂಜಾ ಫೋಟೋ ಸಾಮಾಜಿಕ ಜಾಲ ತಾಣಗಗಲ್ಲಿ ವೈರಲ್ ಆಗಿದೆ.
ಸುನ್ನತ್ ಮಾಡಿಸಿದ ರೀತಿಯಲ್ಲಿ ಶಾಸಕ ಹರೀಶ್ ಪೂಂಜ ಪೋಟೋ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ದೀಪಾವಳಿ ದೋಸೆ ಹಬ್ಬದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಅವರು ಸುನ್ನತ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಮ್ಮ ಕಡೆಯ ಉಸಿರು ಇರುವವರೆಗೂ ಹಿಂದುತ್ವವೇ ಬದುಕು ಎಂಬ ರೀತಿಯ ರಾಜಕಾರಣ ಮಾಡದಿದ್ದರೆ… ಮುಂದೊಂದು ದಿನ ನಾವು ಸುನ್ನತ್ ಮಾಡಿಕೊಳ್ಳಬೇಕಾದ ಸಂದರ್ಭ ಬರಬಹುದು. ಆದ್ದರಿಂದ ನಾವು ಹಿಂದುತ್ವವನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು ಏಂದು ಶಾಸಕರು ಸುನ್ನತ್ ವಿಚಾರವಾಗಿ ಹೇಳಿಕೆ ನೀಡಿದ್ದರು. ಇದೀಗ ಇದೇ ವಿವಾದವಾಗುತ್ತಿದ್ದು ಶಾಸಕನ ಹೇಳಿಕೆಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಪೋಸ್ಟ್‌ಗಳು ವೈರಲ್ ಆಗ್ತಿವೆ. ಈ ಮಧ್ಯೆ ಸುನ್ನತ್ ಮಾಡಿದ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ಪೋಟೊ ಎಡಿಟ್ ಮಾಡಿ ವೈರಲ್ ಆಗಿದೆ.