DAKSHINA KANNADA
ಪುತ್ತೂರು: ಭಾರೀ ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆ.
ಪುತ್ತೂರು, ಜೂನ್ 30 : ಪುತ್ತೂರು ಪರ್ಲಡ್ಕ ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಭಾರೀ ಮಳೆಯಿಂದಾಗಿ ಜೂ.30ರಂದು ಬೆಳಗ್ಗಿನ ಜಾವದಿಂದಲೇ ಮುಳುಗಡೆಯಾಗಿದೆ.
ಬೆಳಿಗ್ಗೆಯಿಂದಲೇ ವಿಪರೀತ ಮಳೆ ಸುರಿಯುತ್ತಿದ್ದ ಕಾರಣ ಮುಳುಗು ಸೇತುವೆಯೆಂದು ಹೆಸರಾದ ಈ ಸೇತುವೆ ಮುಳುಗಡೆಯಾಗಿದ್ದು ಆ ರಸ್ತೆಯಲ್ಲಿ ಚಲಿಸ ಬೇಕಾದ ವಾಹನಗಳಿಗೆ ಅಡಚಣೆ ಉಂಟಾಗಿ ಸಮಸ್ಯೆಯಾಯಿತು.
ಸುತ್ತುವರಿದು ಚಲಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ದೇವಸ್ಯ ಮೂಲಕ ಸಂಚರಿಸಬೇಕಾದ ಖಾಸಗಿ ಬಸ್ಗಳು ಹಾಗೂ ಇತರೇ ವಾಹಗಳಿಗೆ ಅಡಚಣೆ ಉಂಟಾಗಿದ್ದು ಸಂಟ್ಯಾರು ರಸ್ತೆಯ ಮೂಲಕ ಸುತ್ತುವರಿದು ಚಲಿಸುವಂತಾಗಿದೆ.