DAKSHINA KANNADA
ಪುತ್ತೂರು – ಜೋಸ್ ಆಲುಕ್ಕಾಸ್ ನಿಂದ ಚಿನ್ನಾಭರಣ ಎಗರಿಸಿದ ಕಳ್ಳಿಯರು ಪೊಲೀಸ್ ಬಲೆಗೆ

ಪುತ್ತೂರು ಸೆಪ್ಟೆಂಬರ್ 13: ಚಿನ್ನಾಭರಣ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಪುತ್ತೂರು ಹಿಂದೂಸ್ತಾನ್ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಜೋಸ್ ಆಲುಕ್ಕಾಸ್ ನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಮೂವರು ಕಳ್ಳಿಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ದಾವಣಗೆರೆ ಜಿಲ್ಲೆ ನಿವಾಸಿಗಳಾದ ಬೀಬಿಜಾನ್ , ಹುಸೇನ್ ಬಿ , ಜೈತುಂಬಿ ಎಂದು ಗುರುತಿಸಲಾಗಿದೆ. ಇವರು ಸೆಪ್ಟೆಂಬರ್ ೧ ರಂದು ಜೋಸ್ ಅಲುಕಾಸ್ ಗೆ ಬಂದು 3.065 ಗ್ರಾಂ ತೂಕದ 13,400/- ರೂ ಮೌಲ್ಯದ ಚಿನ್ನವನ್ನು ಇರಿಸಿ ಆರೋಪಿಗಳು ಸುಳ್ಳು ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಸುಮಾರು 50.242 ಗ್ರಾಂ ತೂಕದ 2,60,400/- ಮೌಲ್ಯದ ಕಿವಿಯ ಚಿನ್ನಾಭರಣವನ್ನು ವಂಚಿಸಿ ಕಳವು ಮಾಡಿಕೊಂಡು ಹೋಗಿದ್ದರು.

ಈ ಕುರಿತು ಜೋಸ್ ಅಲುಕ್ಕಾಸ್ ಜ್ಯುವೆಲ್ಲರಿ ಮ್ಯಾನೇಜರ್ ರತೀಶ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬೀರಮಲೆ ಗುಡ್ಡೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳವು ಮಾಡಿದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.