Connect with us

DAKSHINA KANNADA

ಪುತ್ತೂರು: ಗಾಂಧಿ ಪ್ರತಿಮೆ ತಲೆಗೆ ಟೀ ಶರ್ಟ್ ಹಾಕಿ ವಿಕೃತಿ

ಪುತ್ತೂರು, ಜುಲೈ 02 : ಗಾಂಧಿ ಪ್ರತಿಮೆಗೆ ಟೀ ಶರ್ಟ್‌ ಹಾಕಿ ಕನ್ನಡಕ ತೆಗೆದು ವಿರೂಪಗೊಳಿಸಿದ ಘಟನೆ ಪುತ್ತೂರು ನಗರದ ಹೃದಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ನಡೆದಿದೆ.

ಈ ಘಟನೆ ನಿನ್ನೆ ಬೆಳಕಿಗೆ ಬಂದಿದ್ದು ಕಿಡಿಗೇಡಿಗಳು ಗಾಂಧಿ ಪ್ರತಿಮೆಯ ಕನ್ನಡಕ ತೆಗೆದು ಪ್ರತಿಮೆಯ ತಲೆಗೆ ಟೀ ಶರ್ಟ್‌ ಇಟ್ಟು, ಕನ್ನಡಕ ತೆಗೆದು ಅವಮಾನಗೊಳಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪುತ್ತೂರು ಡಿವೈಎಸ್​ಪಿ ಡಾ. ಗಾನ ಪಿ.ಕುಮಾರ್‌ ಮತ್ತು ಪುತ್ತೂರು ನಗರ ಠಾಣೆಯ ಸರ್ಕಲ್‌ ಇನ್ಸ್​ಪೆಕ್ಟರ್​ ಗೋಪಾಲ್‌ ನಾಯ್ಕ್‌ ಅವರು ಕಿಡಿಗೇಡಿಗಳ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣದ ಪುತ್ತೂರಿನ ಗಾಂಧಿ ಕಟ್ಟೆ ಸಮಿತಿಯವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *