Connect with us

    DAKSHINA KANNADA

    ಪುತ್ತೂರು- ಮೈರೋಲ್ ಹಣ್ಣು ಎಂದು ಭಾವಿಸಿ ಜ್ಯೂಸ್ ಮಾಡಿ ಕುಡಿದ ಮಹಿಳೆ ಸಾವು

    ಪುತ್ತೂರು ಅಕ್ಟೋಬರ್ 03: ಕಾಡಿನಲ್ಲಿ ಸಿಗುವ ಯಾವುದೋ ಹಣ್ಣನ್ನು ಮೈರೋಲ್ ಎಂದು ಭಾವಿಸಿದ ತಂದು ಜ್ಯೂಸ್ ಮಾಡಿ ಕುಡಿದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಶೇಣಿ‌ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶೇಣಿ ಸಮೀಪದ ಕುಳ್ಳಾಜೆ ನಿವಾಸಿ ಲೀಲಾವತಿ(35) ಎಂದು ಗುರುತಿಸಲಾಗಿದೆ.


    ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು , ತಿನ್ನಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು, ಅದರ ರಸ ತೆಗೆದು ಶರ್ಬತ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು.

    ಇದರ ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು. ಅವರಲ್ಲಿ ಮಗಳು ಮೂರು ಮಕ್ಕಳ ತಾಯಿಯಾಗಿರುವ ಲೀಲಾವತಿಯವರಿಗೆ ವಾಂತಿ, ಭೇದಿ ಆರ೦ಭವಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಸೌಖ್ಯ ತೀವ್ರಗೊ೦ಡು ನಿನ್ನೆ ಹೆಚ್ಚಿನ ಚಿಕಿತ್ಸೆಗಾಗಿ ಮ೦ಗಳೂರಿಗೆ ಕೊ೦ಡೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply