DAKSHINA KANNADA
ಪುತ್ತೂರು – ರಸ್ತೆ ಮಧ್ಯೆಯೇ ಎರಡು ಗುಂಪುಗಳ ನಡುವೆ ಬಿಗ್ ಪೈಟ್ – ವಿಡಿಯೋ ವೈರಲ್

ಪುತ್ತೂರು ಫೆಬ್ರವರಿ 02: ರಸ್ತೆ ಮಧ್ಯೆ ಎರಡು ಗುಂಪುಗಳು ಹೊಡೆದಾಡಿಕೊಂಡ ಘಟನೆ ಪುತ್ತೂರು ಸರಕಾರಿ ಬಸ್ ನಿಲ್ದಾಣದ ಬಳಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಹಣ್ಣು ವಿತರಕ ಪಿಕ್ ಅಪ್ ವಾಹನ ಮತ್ತು ಕಾರಿನಲ್ಲಿ ಬಂದ ಎರಡು ಗುಂಪುಗಳು ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಹೊಡೆದಾಡಿಕೊಂಡಿದ್ದಾರೆ.
ಯಾವ ಕಾರಣಕ್ಕೆ ಹೊಡೆದಾಟ ನಡೆದಿದೆ ಎನ್ನುವ ಮಾಹಿತಿ ತಿಳಿದುಬರಬೇಕಿದೆ ಸುಮಾರು ಅರ್ಧ ಗಂಟೆಗೂ ಹೊತ್ತು ಎರಡು ಗುಂಪುಗಳು ಹೊಡೆದಾಟ ನಡೆದರೂ ಸ್ಥಳಕ್ಕೆ ಯಾವುದೇ ಪೋಲೀಸರು ಆಗಮಿಸಲಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯ ಅಂಗಡಿ ಮಾಲಕರಿಂದ ಎರಡೂ ಗುಂಪುಗಳಿಗೆ ಎಚ್ಚರಿಕೆ ನೀಡಿದ ಬಳಿಕ ಗಲಾಟೆ ನಿಂತಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
