Connect with us

    DAKSHINA KANNADA

    ಮಂಗಳೂರು : ಪಶ್ಚಿಮ ವಲಯ ನೂತನ DIGP ಯಾಗಿ ಡಾ.ಎಂ.ಬಿ. ಬೋರಲಿಂಗಯ್ಯ..!

    ಮಂಗಳೂರು: ಪಶ್ಚಿಮ ವಲಯ ಡಿಐಜಿಪಿ ಯಾಗಿದ್ದ ಅಮಿತ್‌ ಸಿಂಗ್‌ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಅವರ ಜಾಗಕ್ಕೆ ದಕ್ಷಿಣ ವಲಯ ಡಿಐಜಿಪಿಯಾಗಿದ್ದ ಡಾ| ಎಂ.ಬಿ.ಬೋರಲಿಂಗಯ್ಯ ಅವರನ್ನು ನಿಯುಕ್ತಿಗೊಳಿಸಿ ಸರಕಾರ ಆದೇಶಿದೆ. ಅಮಿತ್‌ ಸಿಂಗ್ ಅವರನ್ನು ದಕ್ಷಿಣ ವಲಯ ಡಿಐಜಿಪಿಯಾಗಿ ಮೈಸೂರಿಗೆ ವರ್ಗಾಯಿಸಲಾಗಿದೆ. ಡಾ| ಬೋರಲಿಂಗಯ್ಯ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಲ್ಲನಾಯಕನ ಹಳ್ಳಿಯವರಾಗಿದ್ದು, 2008ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದವರು. ಐಪಿಎಸ್‌ಗೆ ಆಯ್ಕೆಯಾದ ಬಳಿಕ ಕಲಬುರಗಿಯ ಪೊಲೀಸ್‌ ತರಬೇತಿ ಶಾಲೆಯಲ್ಲಿ ಫೌಂಡೇಶನ್‌ ತರಬೇತಿ ಪಡೆದು ತಿಪಟೂರಿನಲ್ಲಿ ಸಹಾಯಕ ಎಸ್‌ಪಿಯಾಗಿ, ಬಳಿಕ ದಾವಣಗೆರೆ, ಉಡುಪಿಯಲ್ಲಿ ಎಸ್ಪಿಯಾಗಿ, ಬೆಂಗಳೂರಿನಲ್ಲಿ ಡಿಸಿಪಿಯಾಗಿ ರಾಜ್ಯ ಗುಪ್ತಚರ ಮತ್ತು ರೈಲ್ವೇ ಪೊಲೀಸ್‌ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply