Connect with us

DAKSHINA KANNADA

ಪುತ್ತೂರು: ಬೀದಿನಾಟಕದೊಂದಿಗೆ ಚುನಾವಣಾ ಜಾಗೃತಿ ಅಭಿಯಾನ

ಪುತ್ತೂರು, ಎಪ್ರಿಲ್ 27: ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್ , ರೋಟರ್ಯಾಕ್ಟ್ ಕ್ಲಬ್ ಬೆಟ್ಟಂಪಾಡಿ ಪ್ರಥಮದರ್ಜೆ ಕಾಲೇಜಿನ ಸಹಯೋಗದೊಂದಿಗೆ ಪುತ್ತೂರು ತಾಲೂಕು ಸ್ವೀಪ್ ಸಮಿತಿಯ ಮಾರ್ಗದರ್ಶನದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 7 ಸ್ಥಳಗಳಲ್ಲಿ ಮತದಾರರ ಜಾಗೃತಿ ಬೀದಿನಾಟಕವನ್ನು ಪ್ರದರ್ಶಿಸಿದೆ.

ಬುಧವಾರದಂದು ಉಪ್ಪಿನಂಗಡಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಸ್ವೀಪ್‌ ಸಮಿತಿ, ಪುತ್ತೂರು ತಾಲೂಕು ಸ್ವೀಪ್‌ ಸಮಿತಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್‌, ಸರಕಾರಿ ಪ್ರಥಮದರ್ಜೆ ಕಾಲೇಜು ಉಪ್ಪಿನಂಗಡಿ, ರೋಟರಿ ಪುತ್ತೂರು ಎಲೈಟ್‌, ರೋಟರಿ ಉಪ್ಪಿನಂಗಡಿ ಹಾಗೂ ರೋಟರ್ಯಾಕ್ಟ್‌ ಕ್ಲಬ್‌ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಂಸಾರ ಜೋಡುಮಾರ್ಗ ಇವರ ಸಹಯೋಗದಲ್ಲಿ ಹಮ್ಮಿಕೊಂಡು ಚುನಾವಣಾ ಜಾಗೃತಿ ಅಭಿಯಾನ, ಜಾಥಾ, ನಡೆಸಲಾಗಿದೆ. ಬಳಿಕ ಪುತ್ತೂರು ಮಹಿಳಾ ಕಾಲೇಜಿನಲ್ಲಿ ಹಾಗೂ ದರ್ಬೆಯಲ್ಲಿರುವ ಫಿಲೋಮಿನಾ ಸ್ನಾತಕೋತ್ತರ ಕಾಲೇಜಿನಲ್ಲಿ ಜಾಗೃತಿ ನಾಟಕ ಪ್ರದರ್ಶನ ನೀಡಲಾಯಿತು.

ಉಪ್ಪಿನಂಗಡಿಯಲ್ಲಿ ಆಕರ್ಷಕ ಜಾಥಾ, ಬೀದಿನಾಟಕ ಚೆಂಡೆ- ಕೊಂಬು, ವಾದ್ಯ-ಘೋಷದೊಂದಿಗೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಉಪ್ಪಿನಂಗಡಿ ಬಸ್‌ ನಿಲ್ದಾಣದವರೆಗೆ ಮತದಾನ ಜಾಗೃತಿಯ ಬ್ಯಾನರ್‌ನೊಂದಿಗೆ ಜಾಥಾ ನಡೆಯಿತು. ʼನಮ್ಮ ಮತ- ನಮ್ಮ ಹಕ್ಕುʼ, ʼಜಾಗೃತ ಮತದಾರ -ಸದೃಢ ಪ್ರಜಾಪ್ರಭುತ್ವದ ಸರದಾರʼ,ʼಮತ ಚಲಾಯಿಸಿ ಜಾಣರೆನಿಸಿʼ,ʼನಿಮ್ಮ ಮತ ಸುಭದ್ರ ಸರಕಾರದ ಆಯ್ಕೆ, ಎಂಬ ಘೋಷಣೆಗಳನ್ನು ಕೂಗುತ್ತ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದರು.

ಬಳಿಕ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಬಸ್‌ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಇದನ್ನು ವೀಕ್ಷಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಭಂಡಾರಿ ಪ್ರತಿಜ್ಞಾವಿಧಿ ಬೋಧಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *