DAKSHINA KANNADA
ಪುತ್ತೂರು : ಆನಾರೋಗ್ಯದಿಂದ ಸರ್ಕಾರಿ ಅಂಗಡಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದಕ್ಕೆ ಅಂಗಡಿಯೇ ಏಲಂ..!
ಪುತ್ತೂರು : ಆನಾರೋಗ್ಯ ನಿಮಿತ್ತ ಸರಕಾರಿ ಅಂಗಡಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದ ಕಾರಣ ಅಂಗಡಿಯನ್ನು ಏಲಂ ಮಾಡಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದೌರ್ಜನ್ನ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಅಂಗಡಿಯಿಂದ ಹೊರ ಹಾಕಲ್ಪಟ್ಟ ಮಹಿಳೆ ಈ ಆರೋಪ ಮಾಡಿದ್ದು ಮಹಿಳೆಯ ಪತಿ ರಾಜ್ ಬಪ್ಪಳಿಗೆ ನ್ಯಾಯಕ್ಕಾಗಿ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಹೇಮಲತಾ ಎನ್ನುವ ಮಹಿಳೆಗೆ ಈ ಅಂಗಡಿ ಏಲಂ ಆಗಿತ್ತು. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ ಆದ್ದರಿಂದ ಸುಮಾರು 72 ಸಾವಿರ ರೂಪಾಯಿ ಬಾಡಿಗೆ ಬಾಕಿಯಿತ್ತು . ಈ ಹಿನ್ನೆಲೆಯಲ್ಲಿ ಆರು ತಿಂಗಳ ಸಮಯಾವಕಾಶ ಕೋರಿ ದ.ಕ. ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಪುತ್ತೂರು ಇ.ಒ ರಿಗೂ ಮನವಿ ಮಾಡಲಾಗಿತ್ತು ಆದ್ರೆ ಈ ಮಧ್ಯೆ ಉದ್ಧೇಶಪೂರ್ವಕವಾಗಿ ಅಂಗಡಿಯನ್ನು ತೆರವುಗೊಳಿಸಲಾಗಿದೆ ಏಮದು ಆರೋಪಿಸಿದ್ದಾರೆ. ಏಲಂ ಪಡೆಯುವ ಮೊದಲು 1 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಲಾಗಿದೆ. ಬಾಕಿ ಬಾಡಿಗೆಗಿಂತ ಜಾಸ್ತಿ ಅಡ್ವಾಸ್ ಹಣವಿತ್ತು ಆದರೂ ಯಾವುದೇ ಸೂಚನೆ ನೀಡದೆ ಅಂಗಡಿಯೊಳಗಿನ ಸಾಮಾಗ್ರಿಗಳನ್ನೂ ಬಿಡದೆ ಏಲಂ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳು ನಷ್ಟವಾಗಿದೆ ಏಮದು ಮಹಿಳೆಯ ಪತಿ ರಾಜ್ ಬಪ್ಪಳಿಗೆ ಆರೋಪಿಸಿದ್ದಾರೆ.