Connect with us

DAKSHINA KANNADA

ಪುತ್ತೂರು: ಎಸ್ ಡಿಪಿಐ ಮಹಿಳಾ ಘಟಕದಿಂದ ಹಣ್ಣು ಹಂಪಲು ವಿತರಣೆ.

ಪುತ್ತೂರು, ಮಾರ್ಚ್ 08: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಎಸ್ ಡಿಪಿಐ ಮಹಿಳಾ ಘಟಕದ ವತಿಯಿಂದ ಬುಧವಾರ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿನ 120ಕ್ಕು ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಯನಾಡಿದ ಎಸ್ ಡಿಪಿಐ ವಿಮೆನ್ ಇಂಡಿಯಾ ಮೂಮೆಂಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಶ್ರಿಯಾ ಅವರು ಇಂದು ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅವರಿಗೆ ಸಂವಿಧಾನ ದತ್ತವಾದ ಹಕ್ಕು ಮತ್ತು ನ್ಯಾಯ ಸಮರ್ಪಕವಾಗಿ ಸಿಗುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಮಹಿಳೆಯರಲ್ಲಿ ಬೆಳೆದಾಗ ಅವರಿಗೆ ಸಮರ್ಪಕ ನ್ಯಾಯ ಸಿಗಲು ಸಾಧ್ಯ. ಮಹಿಳೆರಿಗೆ ನೀಡಿರುವ ಮೀಸಲಾತಿಗಳೂ ಸಮರ್ಪಕವಾಗಿ ಲಭ್ಯ ಆಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಧಿಕಾರಿ ಆಶಾ ಪುತ್ತೂರಾಯ, ಎಸ್ ಡಿಪಿಐ ಮಹಿಳಾ ಚುನಾವಣಾ ಉಸ್ತುವಾರಿ ಝಹಿದಾ ಸಾಗರ್, ಪುತ್ತೂರು ನಗರ ಸಭಾ ಸದಸ್ಯೆ ಝೊಹರಾ ಬನ್ಮೂರು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಶಕೀರಾ ಅಬ್ದುಲ್ಲಾ, ಮಹಿಳಾ ಮುಖಂಡರಾದ ರಝಿಯಾ ಉಕ್ಕುಡ, ನಸೀರಾ ಮುಕ್ವೆ ಉಪಸ್ಥಿತರಿದ್ದರು.

Advertisement
Click to comment

You must be logged in to post a comment Login

Leave a Reply