DAKSHINA KANNADA
ಪುತ್ತೂರು – ಕರೆಂಟ್ ಹೊಡೆದು ವಿಧ್ಯಾರ್ಥಿ ಸಾವು

ಪುತ್ತೂರು ಡಿಸೆಂಬರ್ 18: ವಿದ್ಯುತ್ ಟ್ರಾನ್ಸಫಾರ್ಮರ್ ಏರಿ ವಿದ್ಯುತ್ ಸರಿಮಾಡಲು ಹೋಗಿದ್ದ ವಿಧ್ಯಾರ್ಥಿಯಬ್ಬ ಕರೆಂಟ್ ಹೊಡೆದು ಸಾವನಪ್ಪಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಪಡುವನ್ನೂರು ಗ್ರಾಮದ ಪಡುಮಲೆ ಗ್ರಾಮದ ನಿವಾಸಿ 10ನೇ ತರಗತಿ ವಿಧ್ಯಾರ್ಥಿ ರಂಜಿತ್ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತನ ಮನೆಯಲ್ಲಿ ಕರೆಂಟ್ ಇಲ್ಲದ ಕಾರಣ ಸರಿಮಾಡಲು ವಿದ್ಯುತ್ ಪರಿವರ್ತಕದ ಪೆಟ್ಟಿಗೆ ಅಳವಡಿಸಿದ್ದ ವಿದ್ಯುತ್ ಕಂಬದ ಬಳಿಗೆ ಕರೆದೊಯ್ದಿದ್ದ. ವಿದ್ಯುತ್ ಕಂಬವನ್ನು ಏರಿದ್ದ ರಂಜಿತ್ ವಿದ್ಯುತ್ ಪೂರೈಕೆ ವ್ಯತ್ಯಯವನ್ನು ಸರಿ ಪಡಿಸಲು ಯತ್ನಿಸಿದ್ದ. ಈ ವೇಳೆ ವಿದ್ಯುತ್ ಸಂಪರ್ಕದಿಂದ ಆತ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಸಂಪ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಂಜಿತ್ ಪಡುಮಲೆ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ. ಈ ಶಾಲೆಯಲ್ಲಿ ಭಾನುವಾರ ನಡೆಯಲಿದ್ದ ವಾರ್ಷಿಕೋತ್ಸವವನ್ನು ಬಾಲಕನ ನಿಧನದ ಕಾರಣಕ್ಕೆ ಮುಂದೂಡಲಾಗಿದೆ.
