DAKSHINA KANNADA
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯ ಆರಂಭ
ಪುತ್ತೂರು ಜನವರಿ 16: ದೇಶದಾದ್ಯಂತ ಇಂದು ಕೊರೊನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯಮಿತ್ರಿರಿಗೆ ಚುಚ್ಚುಮದ್ದು ನೀಡುವ ಮೂಲಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯಮಿತ್ರ ಹರೀಶ್ ಎಂಬವರಿ ಮೊದಲ ಲಸಿಕೆ ನೀಡಲಾಯಿತು. ಇಂದು ಒಟ್ಟು 72 ಮಂದಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. ಇನ್ನು ಆರೋಗ್ಯ ಮಿತ್ರ ಹರೀಶ್ ಲಸಿಕೆ ಹಾಕಿಕೊಂಡ ನಂತರ ತಮ್ಮ ಅನಿಸಿಕೆ ತಿಳಿಸಿದ್ದು, ಲಸಿಕೆಯಿಂದ ಯಾವುದೇ ಪರಿಣಾಮ ಆಗಿಲ್ಲ, ಚುಚ್ಚುಮದ್ದು ಹಾಕುವಾಗಲೂ ಯಾವುದೇ ನೋವು ಆಗಿಲ್ಲ ಅಲ್ಲದೆ ತಲೆನೋವು ಸೇರಿದಂತೆ ಯಾವುದೇ ದುಷ್ಪರಿಣಾಮ ಬೀರಿಲ್ಲ ಎಂದರು.
ಪುತ್ತೂರು ತಾಲೂಕಿನ ಒಟ್ಟು 1500 ಕೋವಿಶೀಲ್ಡ್ ವಾಕ್ಸಿನ್ ಬಂದಿದ್ದು, ಒಟ್ಟು 3254 ಮೆಡಿಕಲ್ ಸಿಬ್ಬಂದಿಗಳು ಲಸಿಕೆಗಾಗಿ ನೊಂದಣಿ ಮಾಡಿಸಿಕೊಂಡಿದ್ದಾರೆ.