LATEST NEWS
ವಿವಾದಕ್ಕೆ ಕಾರಣವಾದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಾಕಿದ್ದ ಬುರ್ಖಾ ತೆಗೆದು ಒಳಗೆ ಬನ್ನಿ ಸೂಚನಾ ಫಲಕ
ಪುತ್ತೂರು ಡಿಸೆಂಬರ್ 11: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಾಕಲಾಗಿದ್ದ ಸೂಚನಾ ಫಲಕವೊಂದು ಸದ್ಯ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿರುವ ಇಸಿಜಿ ರೂಂ ನ ಬಾಗಿಲನಲ್ಲಿ ಬುರ್ಖಾ ತೆಗೆದು ಒಳಗೆ ಬನ್ನಿ ಸೂಚನಾ ಫಲಕ ಹಾಕಲಾಗಿತ್ತು. ಇದೀಗ ಇದರ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ಹರಿಯಬಿಡಲಾಗಿತ್ತು, ಪುತ್ತೂರು ಶಾಸಕರು ಇರುವ ವಾಟ್ಸ್ ಅಪ್ ಗ್ರೂಪ್ ನಲ್ಲೂ ಈ ಪೋಸ್ಟ್ ಕಾಣಿಸಿಕೊಂಡಿತ್ತು.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಾಕಲಾಗಿದ್ದ ಫಲಕ ತೆಗೆಯುವಂತೆ ಆಸ್ಪತ್ರೆಗೆ ಸಿಬ್ಬಂದಿಗಳ ಮೇಲೆ ಒತ್ತಡ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನಲೆ ಸೂಚನಾ ಫಲಕವನ್ನು ಆಸ್ಪತ್ರೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಕಳೆದ ಒಂದು ವರ್ಷಗಳ ಹಿಂದೆಯೇ ಈ ಸೂಚನಾ ಫಲಕ ಹಾಕಲಾಗಿತ್ತು. ಇದೀಗ ಬುರ್ಖಾ ತೆಗೆಯದೆ ಇಸಿಜಿ ಮಾಡೋದು ಹೇಗೆಂದು ಗೊಂದಲದಲ್ಲಿರುವ ಆಸ್ಪತ್ರೆ ವೈದ್ಯರು ಮತ್ತು ನರ್ಸ್ ಗಳು ಇದ್ದಾರೆ. ಈ ನಡುವೆ ಚಿಕಿತ್ಸೆಯಲ್ಲೂ ಧರ್ಮವನ್ನು ಎಳೆ ತರುವಂತಹ ಕಿಡಿಗೇಡಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.