DAKSHINA KANNADA
ಮುಂದಿನ ಚುನಾವಣೆಗೆ ಅಶೋಕ್ ರೈ ಬಿಜೆಪಿಗೆ ಸೇರುವುದು ಖಚಿತ – ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ
ಪುತ್ತೂರು ಡಿಸೆಂಬರ್ 18: ಪುತ್ತೂರಿನ ಕಾಂಗ್ರೇಸ್ ಶಾಸಕ ಅಶೋಕ್ ರೈ ವಿರುದ್ದ ಕಾಂಗ್ರೇಸ್ ಕಾರ್ಯಕರ್ತ ಗರಂ ಆಗಿದ್ದು, ಮುಂದಿನ ಚುನಾವಣೆಯ ವೇಳೆ ಅಶೋಕ್ ರೈ ಬಿಜೆಪಿ ಸೇರುವುದು ಖಚಿತ ಎಂದು ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಸವಾಲು ಹಾಕಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಮುಂದಿನ ಚುನಾವಣೆಗೆ ಅಶೋಕ್ ರೈಗಳು ಬಿಜೆಪಿಗೆ ಸೇರುವುದು ಖಚಿತ, ಮುಂದಿನ ಚುನಾವಣೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಅಂತ ಹೇಳಲಿ, ಅಶೋಕ್ ರೈಗಳು ಕಾಂಗ್ರೆಸ್ ಪಕ್ಷದಲ್ಲೇ ಇರ್ತಿನಿ ಅಂತ ‘ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಆಣೆಪ್ರಮಾಣ ಮಾಡಲಿ ಎಂದು ಸವಾಲೆಸೆದಿದ್ದಾರೆ. ನಾನು ಅಶೋಕ್ ರೈಗಳ ಒಂದು ರೂಪಾಯಿಯನ್ನು ಕೂಡ ಮುಟ್ಟಿಲ್ಲ, ಪುತ್ತೂರಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಹಗಲಿರುಳು ದುಡಿದಿದ್ದೇನೆ ಎಂದು ಹೇಳಿದ್ದಾರೆ.
ಈ ನಡುವೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕಗೆ ಸ್ವರ ಎತ್ತಿದ್ದಕ್ಕೆ ಇದೀಗ ಜೀವ ಬೆದರಿಕೆ ಬಂದಿದೆ. ಈಶ್ವರಮಂಗಳ ಮೂಲದ ಅಶೋಕ್ ರೈ ಬೆಂಬಲಿಗನಿಂದ ಜೀವ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ. ಈ ಕುರಿತಂತೆ ಮಾತನಾಡಿದ ಹಕೀಂ ಕೂರ್ನಡ್ಕ್ ಅಶೋಕ್ ರೈಗಳ ಬೆಂಬಲಿಗರ ಜೀವ ಬೆದರಿಕೆಗೆಲ್ಲ ಕುಗ್ಗಲ್ಲ , ಈಗಾಗ್ಲೇ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ನಾನು ನಮ್ಮದೇ ಸರ್ಕಾರ ಇದೆ, ನಮ್ಮದೇ ಶಾಸಕರು ಇದೆ ಪುತ್ತೂರು ಅಭಿವೃದ್ದಿ ಆಗಬಹುದು ಎಂದು ನಂಬಿದ್ದೆ, ಆದ್ರೆ ಅಶೋಕ್ ರೈಗಳು ಪುತ್ತೂರಿಗೆ ಬೇಕಾದ ರಸ್ತೆಯನ್ನೇ ಸರಿಪಡಿಸುತ್ತಿಲ್ಲ, ಈ ಬಗ್ಗೆ ನಮಗೆ ಬೇಕಾದ ಮೂಲ ಸೌಕರ್ಯವನ್ನ ಒದಗಿಸದ ಬಗ್ಗೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಚಕಾರವೆತ್ತಿದ್ದೇನೆ, ಆದ್ರೆ ಶಾಸಕರು ಅವರ ಸಂಸ್ಕೃತಿಯನ್ನ ತೋರಿಸಿ ಕೊಟ್ಟಿದ್ದಾರೆ. ಶಾಸಕರು ಅಭಿವೃದ್ಧಿ ಮಾಡದ ಬಗ್ಗೆ ಮಾತಾಡಿದ್ರೆ ಅವರ ಬೆಂಬಲಿಗರು ಜೀವ ಬೆದರಿಕೆ ಹಾಕುವ ಮಟ್ಟಕ್ಕೆ ಇಳಿಯುತ್ತಾರೆ, ಪುತ್ತೂರು ಶಾಸಕರು ಪಾರ್ಟ್ ಟೈಂ ರಾಜಕಾರಣಿ, ಅವರು ರಾಜಕೀಯದಲ್ಲಿ ಅಷ್ಟು ಪಳಗಿದವರಲ್ಲ. ಕೇವಲ ಮೆಡಿಕಲ್ ಕಾಲೇಜು, ತುಳುವಿನ ಬಗ್ಗೆ ಸದನದಲ್ಲಿ ಮಾತಾಡಿದ್ರೆ ಆಗಲ್ಲ, ಅದರ ಬದಲು ಸಿದ್ದಾರಮಯ್ಯ, ಡಿಕೆಶಿ ಅವರಲ್ಲಿ ಒತ್ತಾಯ ಮಾಡಿಕೊಂಡು ಪುತ್ತೂರನ್ನ ಅಭಿವೃದ್ಧಿಪಡಿಸಿ, ಅದು ಬಿಟ್ಟು ಆಗದ್ದನ್ನ ಮಾತಾಡದೆ, ಅಭಿವೃದ್ದಿ ಆಗುವ ಬಗ್ಗೆ ಮಾತಾಡಿ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನ ನೋಡಿ ಕಲಿಯಿರಿ ಅಂದಿದ್ದೆ, ಯಾಕಂದ್ರೆ ಅವರು ರಾಜಕೀಯದಲ್ಲಿ ತುಂಬಾ ಪಳಗಿದವರು, ಪುತ್ತೂರಿನ ಅಭಿವೃದ್ಧಿಗೆ ಅವರು ತುಂಬಾ ಕೆಲಸ ಮಾಡಿದ್ದಾರೆ. ಮುಸ್ಲಿಂ ಆಗಲಿ ಬೇರೆ ಯಾವುದೇ ಜಾತಿಯನ್ನಾಗಲಿ ಬೇಧ ಭಾವ ಮಾಡದೆ ಅಭಿವೃದ್ಧಿಪಡಿಸಿದ್ದಾರೆ. ಇದನ್ನ ನಾನು ಹೇಳಿರೋದು ಈಗಿನ ಶಾಸಕರು ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನ ನೋಡಿ ಕಲಿಯಿರಿ ಅಂದಿದ್ದೆ, ಇದನ್ನೇ ಇಟ್ಟುಕೊಂಡು ಓರ್ವ ಅಪ್ಪಟ ಕಾಂಗ್ರೆಸ್ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕ್ತಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡ್ತೇನೆ ಎಂದರು.