Connect with us

    LATEST NEWS

    ಪುತ್ತೂರಿನಲ್ಲಿ ಕಸದ ವಿಚಾರದಲ್ಲಿ ಗಲಾಟೆ; ಪೊಲೀಸರ ಎದುರೆ ಪೌರ ಕಾರ್ಮಿಕನ ಮೇಲೆ ತಂಡದಿಂದ ಹಲ್ಲೆ

    ಪುತ್ತೂರು ಸೆಪ್ಟೆಂಬರ್ 5: ರಸ್ತೆ ಬದಿ ಕಸ ಎಸೆದಿರುವುದಲ್ಲದೆ ಪ್ರಶ್ನಿಸಿದ ಪೌರ ಕಾರ್ಮಿಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಪುತ್ತೂರು ನಗರದ ಕೃಷ್ಣನಗರ ಎಂಬಲ್ಲಿ ನಡೆದಿದೆ. ಅಟೋ ಒಂದರಲ್ಲಿ ಬಂದು ರಸ್ತೆಯ ಬದಿಯಲ್ಲಿ ಕಸ ಚೆಲ್ಲುವುದನ್ನು ಪ್ರಶ್ನಿಸಿದ ಪೌರ ಕಾರ್ಮಿಕನ ಮೇಲೆ ಅಟೋದಲ್ಲಿದ್ದ ಮಹಿಳೆಯರ ಸಂಬಂಧಿಕರು ಬಂದು ಹಲ್ಲೆ ನಡೆಸಿರುವುದಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ‌.

    ಅಲ್ಲದೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನೂ ಬೆದರಿಸುವ ಕಾರ್ಯವನ್ನು ತಂಡ ಮಾಡಿದೆ. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಮನೆ ಮಾಡಿತ್ತು. ಘಟನೆ ನಡೆಯುವ ಸ್ಥಳದಲ್ಲಿ ಪುತ್ತೂರು ನಗರ ಪೋಲೀಸ್ ಠಾಣೆಯ ಎ.ಎಸ್.ಐ ಒಬ್ಬರು ಉಪಸ್ಥಿತರಿದ್ದರೂ ,ಪೋಲೀಸರನ್ನೂ ಲೆಕ್ಕಿಸದೆ ತಂದ ಪೌರ ಕಾರ್ಮಿಕನ ಮೇಲೆ ಹಲ್ಲೆಮಾಡಿದೆ.


    ರಸ್ತೆ ಬದಿಯಲ್ಲಿ ಕಸ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಸಂಬಂಧ ಪುತ್ತೂರು ನಗರ ಸಭಾಯ ವ್ಯಾಪ್ತಿಯಲ್ಲಿ ಎಲ್ಲಾ ಕಡೆಗಳಲ್ಲಿ ಸಾರ್ವಜನಿಕ ಮಾಹಿತಿ ಬೋರ್ಡ್ ಗಳನ್ನೂ ಅಳವಡಿಸಲಾಗಿದೆ. ಉಪ್ಪಿನಂಗಡಿ-ಪುತ್ತೂರು ಸಂಪರ್ಕಿಸುವ ಕೃಷ್ಣನಗರ ಎಂಬಲ್ಲಿ ಲೋಡುಗಟ್ಟಲೆ ಕಸವನ್ನು ರಸ್ತೆಯ ಬದಿಯಲ್ಲಿ ಜನ ನಿರಂತರ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯರೇ ಕಸ ಹಾಕುವವರಿಗಾಗಿ ಹೊಂಚು ಹಾಕಿ‌ ಕಾಯುತ್ತಿದ್ದರು‌. ಈ ನಡುವೆ ಅಟೋದಲ್ಲಿ ಬಂದ ಇಬ್ಬರು ಮಹಿಳೆಯರು ಇದೇ ಸ್ಥಳದಲ್ಲಿ ಕಸ ಹಾಕುವುದನ್ನು ಅಲ್ಲೇ ಪಕ್ಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕನೋರ್ವ ಗಮನಿಸಿದ್ದು, ಕಸ ಹಾಕಿದ ಮಹಿಳೆಯರನ್ನು ಪ್ರಶ್ನಿಸಿದ್ದಾನೆ.

    ಮಹಿಳೆಯರು ತಮ್ಮ ಮನೆ ಮಂದಿಗೆ ವಿಷಯ ಮುಟ್ಟಿಸಿದ ತಕ್ಷಣವೇ ಬಂದ ತಂಡವೊಂದು ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಪುತ್ತೂರು ನಗರ ಸಭೆಯ ಪೌರ ಕಾರ್ಮಿಕರು ಒತ್ತಾಯಿಸಿದ್ದು, ಆರೋಪಿಗಳ ಬಂಧನವಾಗುವ ತನಕ ತಮ್ಮ ಕೆಲಸವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಇದೀಗ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೋವಿಡ್ ವಾರಿಯರ್ ಆಗಿರುವ ಪೌರ ಕಾರ್ಮಿಕರ ಮೇಲೆನ ಹಲ್ಲೆಯ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಘಟನೆಯ ವರದಿಗೆ ತೆರಳಿದ ಮಾಧ್ಯಮದ ಮೇಲೂ ತಂಡ ರ‌ಂಪಾಟ ನಡೆಸಿದೆ.

    Video:

    Share Information
    Advertisement
    Click to comment

    Leave a Reply

    Your email address will not be published. Required fields are marked *