DAKSHINA KANNADA
ಪುತ್ತೂರು – ಮೂರು ಆಟೋ ರಿಕ್ಷಾದ ಮೇಲೆ ಬಿದ್ದ ಪುತ್ತೂರು ನಗರಸಭೆಯ ಕೌಂಪೌಂಡ್

ಪುತ್ತೂರು ಮೇ 25: ಭಾರೀ ಮಳೆಗೆ ಪುತ್ತೂರು ನಗರಸಭೆಯ ಕೌಂಪೌಂಡ್ ಕುಸಿತಗೊಂಡ ಘಟನೆ ನಡೆದಿದ್ದು, ಕಂಪೌಂಡ್ ಬದಿಯಲ್ಲೇ ಇರುವ ಮೂರು ಆಟೋಗಳ ಮೇಲೆ ಈ ಕಂಪೌಂಡ್ ಕುಸಿದಿದೆ.
ಪುತ್ತೂರು ನಗರಸಭೆಯ ಕಂಪೌಂಡ್ ಮಳೆಗೆ ಕುಸಿದು ಬಿದ್ದಿದೆ. ಈ ಕಂಪೌಂಡ್ ನ ಬದಿಯಲ್ಲೇ ಆಟೋರಿಕ್ಷಾ ನಿಲ್ದಾಣ ಇದ್ದು, ಅಲ್ಲಿ ನಿಲ್ಲಿಸಿದ್ದ ಬಲ್ನಾಡಿನ 3 ಸರ್ವೀಸ್ ಆಟೋ ರಿಕ್ಷಾಗಳು ಜಖಂಗೊಂಡಿದೆ.
ಆಟೋ ರಿಕ್ಷಾದಲ್ಲಿ ಯಾರೂ ಇಲ್ಲದ ವೇಳೆ ಕುಸಿದ ಕೌಂಪೌಂಡ್ ಪರಿಣಾಮ ಭಾರೀ ದುರಂತವೊಂದು ತಪ್ಪಿದೆ.

ಸದ್ಯ ಕೌಂಪೌಂಡ್ ನ ಕಲ್ಲು ಹಾಗೂ ರಸ್ತೆ ಬದಿ ಬಿದ್ದಿರುವ ಮಣ್ಣು ಪುತ್ತೂರು ನಗರಸಭೆ ವತಿಯಿಂದ ತೆರವುಗೊಳಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ, ಸದಸ್ಯ ಸುಂದರ ಪೂಜಾರಿ ಬಡಾವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.