DAKSHINA KANNADA
ಪುತ್ತೂರಿನಲ್ಲಿ ಕಗ್ಗಂಟಾದ ನಗರಸಭಾ ಬೈಎಲೆಕ್ಷನ್, ಬಿಜೆಪಿಗೆ ಪುತ್ತಿಲ ಪರಿವಾರ ಠಕ್ಕರ್..!
ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಮತ್ತೆ ರಾಜಕೀಯ ಸೆಣಸಾಟಕ್ಕೆ ವೇದಿಕೆ ಸಿದ್ದಗೊಂಡಿದೆ. ಪ್ರಬಲ ಪಕ್ಷ ಬಿಜೆಪಿಗೆ ಠಕ್ಕರ್ ನೀಡಲು ಪುತ್ತಿಲ ಪರಿವಾರ ಅಣಿಯಾಗುತ್ತಿದೆ.
ಪುತ್ತೂರು : ಕರಾವಳಿಯಲ್ಲಿ ವಿಧಾನ ಸಭಾ ಚುನಾವಣೆ ಬಳಿಕ ಸೈಲೆಂಟ್ ಆಗಿದ್ದ ರಾಜಕೀಯ ಮತ್ತೆ ಗರಿಗೆದರಿದೆ. ಅದರಲ್ಲೂ ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಮತ್ತೆ ರಾಜಕೀಯ ಸೆಣಸಾಟಕ್ಕೆ ವೇದಿಕೆ ಸಿದ್ದಗೊಂಡಿದೆ. ಪ್ರಬಲ ಪಕ್ಷ ಬಿಜೆಪಿಗೆ ಠಕ್ಕರ್ ನೀಡಲು ಪುತ್ತಿಲ ಪರಿವಾರ ಅಣಿಯಾಗುತ್ತಿದೆ.
ಪುತ್ತೂರು ನಗರಸಭೆಯ ತೆರವಾದ ಎರಡು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತನ್ನ ಪರಿವಾದ ಅಭ್ಯರ್ಥಿಗಳನ್ನು ಪುತ್ತಿಲ ಪರಿವಾರ ಕಣಕ್ಕಿಳಿಸಿದೆ. ನಗರಸಭೆ ವ್ಯಾಪ್ತಿಯ ರಕ್ತೇಶ್ವರಿ ಮತ್ತು ನೆಲ್ಲಿಕಟ್ಟೆ ವಾರ್ಡ್ ಗಳ ಸದಸ್ಯರಾಗಿದ್ದ ಶಿವರಾಮ ಸಫಲ್ಯ ಮತ್ತು ಶಕ್ತಿಸಿನ್ಹ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಉಪಚುನಾವಣೆ ನಡೆಯಲಿದೆ. ಈ ವಾರ್ಡ್ ಗಳಲ್ಲಿ ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದರು. ಇದೀ ಗ ಈ 2 ವಾರ್ಡ್ ಗಳನ್ನು ತನ್ನ ತೆಕ್ಕೆಗೆ ಹಾಕಲು ಪುತ್ತಿಲ ಪರಿವಾರ ಯೋಜನೆ ರೂಪಿಸಿದೆ. ಪುತ್ತಿಲ ಪರಿವಾರದಿಂದ ಅನ್ನಪೂರ್ಣ ರಾವ್ ಮತ್ತು ಚಿಂತನ್ ಅವರು ನಾಮಪತ್ರ ಸಲ್ಲಿಸಿದ್ದು ಗೆಲ್ಲು ವಿಶ್ವಾಸದಲ್ಲಿ ನಾಯರಿದ್ದಾರೆ.
ಮತ್ತೊಂದೆಡೆ ಹಿಂದುತ್ವದ ಆಧಾರದಲ್ಲೇ ನಡೆಯುವ ಪುತ್ತಿಲ ಪರಿವಾರದ ಸ್ಪರ್ಧೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಕಾರಣ ಬಿಜೆಪಿಯಲ್ಲಿ ಗುರುತಿಸಿಕೊಂಡವರೇ ಪುತ್ತಿಲ ಪರಿವಾರ ಸಂಘಟನೆಯಲ್ಲಿರುವುದು ಬಿಜೆಪಿಗೆ ಸಹಜವಾಗಿ ತಲೆನೋವು ತಂದಿದೆ. ಆದ್ರೂ ಪುತ್ತಿಲ ಪರಿವಾರಕ್ಕೆ ಸಡ್ಡು ಕೊಡಲು ಬಿಜೆಪಿಯೂ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ನೆಲ್ಲಿಕಟ್ಟೆ ವಾರ್ಡ್ ನಿಂದ ರಮೇಶ್ ರೈ ಮತ್ತು ರಕ್ತೇಶ್ವರಿ ವಾರ್ಡ್ ನಿಂದ ಸುನಿತಾ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಾಗಿ ಕಣದಲ್ಲಿದ್ದು ಈ ಎರಡೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಬಿಜೆಪಿ ವ್ಯಕ್ತಪಡಿಸಿದೆ.
ಪುತ್ತಿಲ ಪರಿವಾರ ಸಂಘಟನೆಗೆ ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ನಿಲ್ಲಲು ಅವಕಾಶವಿದೆ. ನಗರಸಭೆ ಚುನಾವಣೆ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸುತ್ತಿದೆ. ಆದ್ರೆ ಕಳೆದ ಬಾರಿ ಚುನಾವಣೆಯಂತೆ ಪುತ್ತಿಲ ಪರಿವಾರ ಬಿಜೆಪಿ ನಾಯಕರ ಫೋಟೋ ಬಳಸುವುದರ ಮೇಲೆ ಕ್ರಮ ಕೈಗೊಳ್ಳಲು ಬಿಜೆಪಿ ಸಿದ್ದತೆ ನಡೆಸಿದೆ. ಈ ಬಾರಿ ಅಭಿವೃದ್ಧಿ ಹೆಸರಿನಲ್ಲಿ ಮತದಾರರ ಮುಂದೆ ಹೋಗಲು ಎರಡೂ ಕೇಸರಿ ಸಂಘಟನೆಗಳು ಚಿಂತನೆ ನಡೆಸಿದ್ದು ಅಂತಿಮವಾಗಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂದು ಕಾದು ನೋಡಬೇಕಿದೆ.